ನ್ಯೂಯಾರ್ಕ್: ಭಾರತದ ಮೇಲೆ ಹಿಗ್ಗಾಮುಗ್ಗಾ ಸುಂಕ ಹೇರಿ ತಾನೇ ಕೈಯಾರೆ ಸಂಬಂಧ ಹಾಳು ಮಾಡಿಕೊಂಡ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಬ್ರೇಕಪ್ ಸಂದೇಶ ಕಳುಹಿಸಿದ್ದಾರೆ. ಟ್ರಂಪ್ ಹೊಸ ಹೇಳಿಕೆ ನೋಡಿ ಈವಯ್ಯನಿಗೆ ಇದೇನಾಗಿದೆ ಎನ್ನುತ್ತಿದ್ದಾರೆ ಜನ.
ಅಮೆರಿಕಾ ಸುಂಕ ಸಮರ ಹೇರಿ ಬೆದರಿಕೆ ಹಾಕುತ್ತಿದ್ದಂತೇ ಭಾರತ, ರಷ್ಯಾ ಮತ್ತು ಚೀನಾ ಒಗ್ಗಟ್ಟಾಗಿದೆ. ಇದು ಟ್ರಂಪ್ ನಿದ್ದೆಗೆಡಿಸಿದೆ. ಇದಕ್ಕಾಗಿ ದಿನಕ್ಕೊಂದು ಹುಚ್ಚು ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಇಂದು ಟ್ರಂಪ್ ಭಾರತ ಮತ್ತು ರಷ್ಯಾಗೆ ಬ್ರೇಕಪ್ ಸಂದೇಶ ಕಳುಹಿಸಿದ್ದಾರೆ.
ನಾವು ಭಾರತ ಮತ್ತು ರಷ್ಯಾವನ್ನು ನಾವು ಕಳೆದುಕೊಂಡೆವು ಎನಿಸುತ್ತಿದೆ. ಈ ಮೂರು ರಾಷ್ಟ್ರಗಳು ಜೊತೆಯಾಗಿ ಸಂತೋಷವಾಗಿರಲಿ ಎಂದು ಪ್ರೇಮಿಗಳು ಬ್ರೇಕಪ್ ಸಂದೇಶ ಕಳುಹಿಸುವಂತೆ ತಮ್ಮ ಸೋಷಿಯಲ್ ಮೀಡಿಯಾ ಡೊನಾಲ್ಡ್ ಟ್ರಂಪ್ ಟ್ರೂಥ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಟ್ರಂಪ್ ಹೊಸ ಸಂದೇಶ ನೋಡಿ ಜನ ಟ್ರೋಲ್ ಮಾಡುತ್ತಿದ್ದಾರೆ. ಅಮೆರಿಕಾಗೆ ಹಿಂದೆಂದೂ ಇಂಥಾ ಅಧ್ವಾನದ ಅಧ್ಯಕ್ಷರು ಬಂದಿರಲಿಲ್ಲ. ಏನೋ ಮಾಡಲು ಹೋಗಿ ಈಗ ತಮ್ಮದೇ ಬುಡಕ್ಕೆ ಬಂದಿದೆ ಎಂದು ಟ್ರಂಪ್ ಗೂ ಅರಿವಾಗಿದೆ ಎನ್ನುವುದು ಅವರ ಈ ಸಂದೇಶ ನೋಡಿದರೇ ಗೊತ್ತಾಗುತ್ತಿದೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.