ಮುಂಬೈ (ಮಹಾರಾಷ್ಟ್ರ): ದೆಹಲಿ ಹೈಕೋರ್ಟ್ ನಂತರ, ಬಾಂಬೆ ಹೈಕೋರ್ಟ್ ಶುಕ್ರವಾರ ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೆದರಿಕೆ ಬೆನ್ನಲ್ಲೇ ಕೋರ್ಟ್‌ನಲ್ಲಿದ್ದ ವಕೀಲರು ಮತ್ತು ಇತರ ಸಿಬ್ಬಂದಿಯನ್ನು ನ್ಯಾಯಾಲಯದ ಆವರಣದಿಂದ ಹೊರಗಡೆ ಕಳುಹಿಸಲಾಯಿತು. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆ ಸಂಬಂಧ ಎಎನ್‌ಐಗೆ ಪ್ರತಿಕ್ರಿಯಿಸಿ ವಕೀಲೆ ಮಂಗಳಾ ವಾಘೆ, ಬಾಂಬ್ ಬೆದರಿಕೆ ವದಂತಿ ಇದೆ. ಕೂಡಲೇ ಕೋರ್ಟ್ ಆವರಣದಿಂದ ಹೊರಗಡೆ ಹೋಗುವಂತೆ ಪೊಲೀಸರು ಹೇಳಿದರು. ಇದು ಮುಖ್ಯ ನ್ಯಾಯಮೂರ್ತಿಗಳ ಆದೇಶ ಎಂದು ಅವರು ನಮಗೆ ಹೇಳಿದರು ಎಂದು ಅವರು ವಿವರಿಸಿದರು.
ಶುಕ್ರವಾರ ದೆಹಲಿ ಹೈಕೋರ್ಟ್‌ನಲ್ಲಿ ಭಾರಿ ಭದ್ರತಾ ಭೀತಿ ಆವರಿಸಿದ್ದು, ನ್ಯಾಯಾಲಯದ ಆವರಣ ಮತ್ತು ಸುತ್ತಮುತ್ತ ಬಾಂಬ್ ಎಚ್ಚರಿಕೆಯ ಇಮೇಲ್ ಬೆದರಿಕೆಯ ನಂತರ ಸಿಬ್ಬಂದಿ ಆತಂಕ ಮತ್ತು ಕಲಾಪಕ್ಕೆ ಅಡ್ಡಿಪಡಿಸಿತು.
ಇನ್ನೂ ಜನರು ಕೋರ್ಟನಿಂದ ಹೊರಬರುತ್ತಿದ್ದ ಹಾಗೇ ಗೊಂದಲದ ವಾತಾವರಣ ಸೃಷ್ಟಿಯಾಗಿಯಿತು.
ದೆಹಲಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸೇರಿದಂತೆ ಭದ್ರತಾ ಪಡೆಗಳು ತ್ವರಿತವಾಗಿ ಪ್ರದೇಶವನ್ನು ಸುತ್ತುವರೆದಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ದಳದ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಸ್ನಿಫರ್ ಡಾಗ್‌ಗಳನ್ನು ಹೊಂದಿರುವ ತಂಡಗಳು ಆವರಣದಲ್ಲಿ ಸಂಪೂರ್ಣ ಹುಡುಕಾಟ ನಡೆಸಿವೆ.