ನವದೆಹಲಿ: ಒಂದು ಕಡೆಯಿಂದ ಮೋದಿ ನನ್ನ ಫ್ರೆಂಡ್, ಅವರ ಜೊತೆ ಮಾತನಾಡಲು ಕಾಯ್ತಿದ್ದೇನೆ ಎಂದು ಇನ್ನೊಂದು ಕಡೆಯಿಂದ ಭಾರತಕ್ಕೆ ಡಬಲ್ ಸುಂಕ ಹೇರಲು ಡೊನಾಲ್ಡ್ ಟ್ರಂಪ್ ಸಂಚು ರೂಪಿಸಿದ್ದಾರಾ ಎಂಬ ಅನುಮಾನ ಮೂಡಿದೆ.
ಅಮೆರಿಕಾದ 50% ಸುಂಕಕ್ಕೆ ಜಗ್ಗದೇ ಭಾರತ ರಷ್ಯಾ ಜೊತೆಗೆ ವ್ಯಾಪಾರ ಮುಂದುವರಿಸಿದೆ. ಚೀನಾಗೂ ಹತ್ತಿರವಾಗುತ್ತಿದೆ. ಇದನ್ನು ಕಂಡು ಟ್ರಂಪ್ ಹೊಟ್ಟೆ ಉರಿದುಕೊಂಡಿದ್ದರು. ನಿನ್ನೆ ಇದ್ದಕ್ಕಿದ್ದಂತೆ ಮೋದಿ ನನ್ನ ಫ್ರೆಂಡ್, ಅವರ ಜೊತೆ ಮಾತನಾಡಲು ಕಾಯ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಆದರೆ ತೆರೆಮರೆಯಲ್ಲೇ ಟ್ರಂಪ್ ಯುರೋಪ್ ಒಕ್ಕೂಟಗಳಿಗೆ ಭಾರತ ಮತ್ತು ಚೀನಾ ಮೇಲೆ 100% ಸುಂಕ ಹೇರಲು ಒತ್ತಡ ಹೇರಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ರಷ್ಯಾ-ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಲು ಇದು ಅನಿವಾರ್ಯ ಎಂದು ಒತ್ತಡ ಹಾಕಿದ್ದಾರಂತೆ.
ನಾವು ಭಾರತದ ಮೇಲೆ ಶೇ.100 ಸುಂಕ ವಿಧಿಸಿದರೆ ನೀವೂ ಹಾಕಬೇಕು ಎಂದು ರಾಯಭಾರಿಗಳ ಮೂಲಕ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಒಂದು ಕಡೆ ಮೋದಿ ನನ್ ಫ್ರೆಂಡ್ ಎನ್ನುತ್ತಲೇ ಇನ್ನೊಂದು ಕಡೆಯಿಂದ ಟ್ರಂಪ್ ಮಾತ್ರ ತನ್ನ ಚಾಳಿ ಬಿಟ್ಟಿಲ್ಲ ಎನ್ನಲಾಗುತ್ತಿದೆ.