ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಮೊದಲ ಪಂದ್ಯವನ್ನು ಅತಿಥೇಯ ಯುಎಇ ವಿರುದ್ಧ ಆಡಲಿದೆ. ಇಂದಿನ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ ಇಲ್ಲಿದೆ ಸಂಪೂರ್ಣ ವಿವರ.
ಬಹಳ ದಿನಗಳ ನಂತರ ಟೀಂ ಇಂಡಿಯಾ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೆ ಕ್ರಿಕೆಟ್ ಪಂದ್ಯ ನೋಡುವ ಅವಕಾಶ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆದ ಬಳಿಕ ಬಹುದಿನಗಳ ಬ್ರೇಕ್ ಪಡೆದಿದ್ದ ಟೀಂ ಇಂಡಿಯಾ ಈಗ ಹೊಸ ಸವಾಲಿಗೆ ಸಿದ್ಧವಾಗಿದೆ.
ಏಷ್ಯಾ ಕಪ್ ನಲ್ಲಿ ಇದುವರೆಗೂ ಭಾರತದ್ದೇ ಆಧಿಪತ್ಯ. ಈ ಬಾರಿಯೂ ಭಾರತವೇ ಗೆಲ್ಲುವ ಫೇವರಿಟ್ ಆಗಿದೆ. ಈ ಪಂದ್ಯಕ್ಕೆ ಭಾರತದ ಆರಂಭಿಕರಾಗಿ ಶುಭಮನ್ ಗಿಲ್-ಅಭಿಷೇಕ್ ಶರ್ಮಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹೀಗಾದಲ್ಲಿ ಸಂಜು ಸ್ಯಾಮ್ಸನ್ ಬೆಂಚ್ ಕಾಯಿಸಬೇಕಾದೀತು.
ಭಾರತ ತಂಡ ಯುವ ತಂಡವೇ ಆಗಿದ್ದರೂ ಟಿ20 ಸ್ಪೆಷಲಿಸ್ಟ್ ಗಳನ್ನೇ ಹೊಂದಿದೆ. ಮಧ್ಯಮ ಕ್ರಮಾಂಕಕ್ಕೆ ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ ಇದ್ದರೆ ಕೆಳ ಕ್ರಮಾಂಕಕ್ಕೆ ರಿಂಕು ಸಿಂಗ್, ಜಿತೇಶ್ ಶರ್ಮನಂತಹ ಸ್ಪೋಟಕ ಬ್ಯಾಟರ್ ಗಳಿದ್ದಾರೆ. ಬೌಲಿಂಗ್ ನಲ್ಲೂ ಅರ್ಷ್ ದೀಪ್ ಸಿಂಗ್, ಅಕ್ಸರ್ ಪಟೇಲ್ ನಂತಹ ಬೌಲರ್ ಗಳನ್ನೊಳಗೊಂಡ ತಂಡ ಬಲಿಷ್ಠವಾಗಿದೆ. ಭಾರತದ ಮುಂದೆ ಯುಎಇ ತಂಡ ಏನೇನೂ ಅಲ್ಲ ಎನ್ನಬಹುದು.
ಇನ್ನು, ಯುಎಇನಲ್ಲಿ ಐಪಿಎಲ್ ಆಡಿ ಭಾರತೀಯ ಆಟಗಾರರಿಗೆ ಸಾಕಷ್ಟು ಅನುಭವವಿದೆ. ಇಲ್ಲಿನ ಪಿಚ್ ಗಳು ಕೊಂಚ ಸ್ಪಿನ್ನರ್ ಗಳಿಗೂ ಸಹಕರಿಸುವುದರಿಂದ ಭಾರತಕ್ಕೆ ಅನುಕೂಲಕರವಾಗಿರಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್ ನೆಟ್ ವರ್ಕ್ ವಾಹಿನಿಗಳಲ್ಲಿ ಅಥವಾ ಸೋನಿ ಲೈವ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.