ದುಬೈ: ಯುಎಇನಲ್ಲಿ ನಡೆಯಲಿರುವ ಟಿ20 ಮಾದರಿಯ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗಲು ಈಗಾಗಲೇ ಬಹುತೇಕ ಟೀಂ ಇಂಡಿಯಾ ಆಟಗಾರರು ಅರಬರ ನಾಡಿಗೆ ಬಂದಿಳಿದಿದ್ದಾರೆ. ತಂಡದ ಅಭ್ಯಾಸ ಯಾವಾಗ ಶುರುವಾಗುತ್ತದೆ ಇತ್ಯಾದಿ ಮಾಹಿತಿ ಇಲ್ಲಿದೆ.
ನಿನ್ನೆಯಷ್ಟೇ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಬಹುತೇಕ ಆಟಗಾರರು, ಸಹಾಯಕ ಸಿಬ್ಬಂದಿ ದುಬೈಗೆ ಬಂದಿಳಿದಿದ್ದರು. ಈ ಬಾರಿ ಆಟಗಾರರು ಪ್ರತ್ಯೇಕ ಪ್ರತ್ಯೇಕವಾಗಿ ದುಬೈಗೆ ಬಂದಿಳಿದಿದ್ದಾರೆ.
ಸೆಪ್ಟೆಂಬರ್ 10 ರಿಂದ ಟೀಂ ಇಂಡಿಯಾ ಪಂದ್ಯಗಳು ಶುರುವಾಗಲಿದೆ. ಆದರೆ ಕಳೆದ ಕೆಲವು ದಿನಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಿರುವ ಕ್ರಿಕೆಟಿಗರಿಗೆ ವಾರಕ್ಕೆ ಮುಂಚಿತವಾಗಿ ಅಭ್ಯಾಸ ಆರಂಭಿಸಲು ಬಿಸಿಸಿಐ ಸೂಚನೆ ನೀಡಿದೆ. ಹೀಗಾಗಿ ಇಂದಿನಿಂದಲೇ ಪ್ರಾಕ್ಟೀಸ್ ಸೆಷನ್ ಆರಂಭವಾಗಲಿದೆ.
ಭಾರತಕ್ಕೆ ಲೀಗ್ ಹಂತದಲ್ಲಿ ಸೆಪ್ಟೆಂಬರ್ 10, ಸೆಪ್ಟೆಂಬರ್ 14 ಮತ್ತು ಸೆಪ್ಟೆಂಬರ್ 19 ರಂದು ಪಂದ್ಯಗಳಿವೆ. ಸೆಪ್ಟೆಂಬರ್ 20 ರಿಂದ ಪ್ಲೇ ಆಫ್ ಹಂತದ ಪಂದ್ಯಗಳು ಆರಂಭವಾಗಲಿದೆ. ಪ್ಲೇ ಆಫ್ ನಲ್ಲಿ ಗೆದ್ದ ತಂಡಗಳು ಫೈನಲ್ ಗೇರಲಿವೆ.