ನವದೆಹಲಿ: ಒಂದೆಡೆ ಭಾರತ ಕೊರೋನಾ ಸಂಕಷ್ಟದಿಂದ ಹೊರಬರಲು ಹೆಣಗಾಡುತ್ತಿದ್ದರೆ, ಅತ್ತ ಲಡಾಖ್ ಗಡಿಯಲ್ಲಿ ಚೀನಾ ಸೇನೆ ಮತ್ತೆ ತನ್ನ ಪ್ರಾಬಲ್ಯ ಹೆಚ್ಚಿಸಲು ಮುಂದಾಗಿದೆ.
ಆಂಗ್ಲ ವಾಹಿನಿಯೊಂದರ ಪ್ರಕಾರ ಪೂರ್ವ ಲಡಾಖ್ ನ ಆಯಕಟ್ಟಿನ ಪ್ರದೇಶಗಳಲ್ಲಿ ಚೀನಾ ಸೇನೆ ಮತ್ತೆ ತನ್ನ ಬಿಡಾರ ಹೂಡಿದೆ. ಇದು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ.
ಕಳೆದ ಫೆಬ್ರವರಿಯಲ್ಲಿ ಉಭಯ ದೇಶಗಳ ನಡುವಿನ ಒಪ್ಪಂದದಂತೆ ಎರಡೂ ದೇಶದ ಸೈನಿಕರು ಇಲ್ಲಿಂದ ಸೇನೆ ಹಿಂಪಡೆದಿದ್ದವು. ಆದರೆ ಭಾರತ ಇತ್ತ ಕೊರೋನಾ ವಿಚಾರದಲ್ಲಿ ತಲ್ಲೀನವಾಗಿರುವ ಬೆನ್ನಲ್ಲೇ ಚೀನಾ ಸೇನೆ ಸದ್ದಿಲ್ಲದೇ ಗಡಿಯಲ್ಲಿ ಬೇರೂರಲು ಪ್ರಯತ್ನ ನಡೆಸಿದೆ.