Select Your Language

Notifications

webdunia
webdunia
webdunia
webdunia

ಕೊರೋನಾಗೆ ಬೇಕಾದ ನೆರವು ನಾವು ಕೊಡ್ತೀವಿ: ಭಾರತಕ್ಕೆ ಚೀನಾ ಆಫರ್

ಕೊರೋನಾಗೆ ಬೇಕಾದ ನೆರವು ನಾವು ಕೊಡ್ತೀವಿ: ಭಾರತಕ್ಕೆ ಚೀನಾ ಆಫರ್
ನವದೆಹಲಿ , ಶನಿವಾರ, 24 ಏಪ್ರಿಲ್ 2021 (09:35 IST)
ನವದೆಹಲಿ: ದೇಶದಲ್ಲಿ ಕೊರೋನಾ ಸಂಖ್ಯೆ ವಿಪರೀತವಾಗಿ ಏರಿಕೆಯಾಗುತ್ತಿದ್ದು, ಈ ನಡುವೆ ಜಗತ್ತಿಗೇ ಕೊರೋನಾ ಮೊದಲ ಬಾರಿಗೆ ಹರಡಿದ ಚೀನಾ ದೇಶ ಭಾರತಕ್ಕೆ ನೆರವು ನೀಡುವುದಾಗಿ ಆಫರ್ ಕೊಟ್ಟಿದೆ.


ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಚೀನಾ ವಿದೇಶಾಂಗ ಸಚಿವರಿಗೆ ಪ್ರಶ್ನಿಸಿದಾಗ ಅವರು ಭಾರತಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ನೀಡಲು ಸಿದ್ಧ ಎಂದಿದ್ದಾರೆ. ಇಂತಹ ಸಂಕಟದ ಪರಿಸ್ಥಿತಿಯನ್ನು ಎದುರಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಸಹಕಾರ, ಸಹಾಯ ಅಗತ್ಯ ಎಂದಿದ್ದಾರೆ.

ಆದರೆ ಭಾರತಕ್ಕೆ ನೆರವು ನೀಡುವುದಾಗಿ ಚೀನಾ ಅಧಿಕೃತವಾಗಿ ನೆರವಿನ ಹಸ್ತ ಚಾಚಿಲ್ಲ. ಕೇವಲ ಪತ್ರಿಕಾ ಹೇಳಿಕೆಗಷ್ಟೇ ಸೀಮಿತವಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೀಟಿಂಗ್ ನೇರಪ್ರಸಾರ ಎಡವಟ್ಟು: ದೆಹಲಿ ಸಿಎಂ ವರ್ತನೆಗೆ ಪ್ರಧಾನಿ ಮೋದಿ ಆಕ್ಷೇಪ