Select Your Language

Notifications

webdunia
webdunia
webdunia
webdunia

ಬಡವರಿಗೆ ಕೇಂದ್ರದಿಂದ 5 ಕೆಜಿ ಆಹಾರ ಧಾನ್ಯ ಉಚಿತ

ಬಡವರಿಗೆ ಕೇಂದ್ರದಿಂದ 5 ಕೆಜಿ ಆಹಾರ ಧಾನ್ಯ ಉಚಿತ
ನವದೆಹಲಿ , ಶನಿವಾರ, 24 ಏಪ್ರಿಲ್ 2021 (09:12 IST)
ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ಜೋರಾಗಿದ್ದು, ಹಲವರು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಡವರಿಗಾಗಿ ಉಚಿತ ಆಹಾರ ಧಾನ್ಯ ವಿತರಿಸುವ ಯೋಜನೆ ಪ್ರಕಟಿಸಿದೆ.

 

ಮುಂದಿನ ಎರಡು ತಿಂಗಳ ಅವಧಿಯಲ್ಲಿ ಸುಮಾರು ಬಡವರಿಗೆ 5 ಕೆಜಿಯಷ್ಟು ಉಚಿತ ಆಹಾರ ಧಾನ್ಯ ವಿತರಣೆಯಾಗಲಿದೆ. ಸುಮಾರು 80 ಕೋಟಿ ಜನರು ಇದರ ಲಾಭ ಪಡೆದುಕೊಳ್ಳಲಿದ್ದಾರೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾದಡಿಯಲ್ಲಿ ಫಲಾನುಭವಿಗಳಿಗೆ ಮೇ ಮತ್ತು ಜೂನ್ ತಿಂಗಳ ಅವಧಿಯಲ್ಲಿ ಆಹಾರ ಧಾನ್ಯ ಪೂರೈಕೆಯಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 26 ಸಾವಿರ ಕೋಟಿ ರೂ.ಗಳಷ್ಟು ವೆಚ್ಚ ಮಾಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಮಾಡಿದ ಈ ಕೆಲಸದಿಂದ ಜೀವ ಕಳೆದುಕೊಂಡ ಪತಿ