Select Your Language

Notifications

webdunia
webdunia
webdunia
webdunia

ಪತ್ನಿ ಮಾಡಿದ ಈ ಕೆಲಸದಿಂದ ಜೀವ ಕಳೆದುಕೊಂಡ ಪತಿ

ಪತ್ನಿ ಮಾಡಿದ ಈ ಕೆಲಸದಿಂದ ಜೀವ ಕಳೆದುಕೊಂಡ ಪತಿ
ಬೆಂಗಳೂರು , ಶನಿವಾರ, 24 ಏಪ್ರಿಲ್ 2021 (07:12 IST)
ಬೆಂಗಳೂರು : ಪತ್ನಿ ವಿಚ್ಛೇದನ ನೀಡುವುದಾಗಿ ಎನ್ ಜಿಓ ಜೊತೆ ಸೇರಿ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಬೆಂಗಳೂರಿನ ಜಗಜೀವನಂ ನಗರದಲ್ಲಿ ನಡೆದಿದೆ.

ವ್ಯಕ್ತಿ ಹಾಗೂ ಮಹಿಳೆ 2 ವರ್ಷಗಳ ಹಿಂದೆ ಮದುವೆಯಾಗಿದ್ದು , ಒಂದು ವರ್ಷದ ಮಗನಿದ್ದಾನೆ. ಹೀಗಿರುವಾಗ ಪತ್ನಿ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಪತಿ ಕುಡಿತದ ದಾಸನಾದನು. ಹಾಗೂ ಪತ್ನಿಗೆ ವಿಚ್ಛೇದನ ನೀಡಲು ಮುಂದಾದನು. ಆದರೆ ಪತ್ನಿ ಎನ್ ಜಿಓ ಸಹಾಯ ಪಡೆದು ಆತನ ಬಳಿ 20ಲಕ್ಷ ರೂ ಜೀವನಾಂಶ ಕೇಳಿದ್ದಾಳೆ. ಮತ್ತು ಬೆದರಿಕೆ ಹಾಕಿದ್ದಾಳೆ.

ಇದರಿಂದ ಬೇಸತ್ತ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಸಂತ್ರಸ್ತನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣ ಗಳಿಸಲು ನಕಲಿ ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದವರ ಬಂಧನ