Publish Date: Sat, 24 Apr 2021 (09:26 IST)
Updated Date: Sat, 24 Apr 2021 (09:29 IST)
ನವದೆಹಲಿ: ಪ್ರಧಾನಿ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಮೀಟಿಂಗ್ ನ್ನು ಟಿವಿ ಮಾಧ್ಯಮಗಳಿಗೆ ನೇರಪ್ರಸಾರ ಮಾಡಲು ಅವಕಾಶ ಕೊಟ್ಟು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎಡವಟ್ಟು ಮಾಡಿದ್ದಾರೆ. ಇದಕ್ಕೆ ಸ್ವತಃ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಜೊತೆಗೆ ಆಂತರಿಕ ಸಭೆ ನಡೆಸುತ್ತಿದ್ದಾಗ ಅದನ್ನು ಕೆಲವು ಸುದ್ದಿ ಮಾಧ್ಯಮಗಳು ನೇರಪ್ರಸಾರ ಮಾಡಿದ್ದವು. ಇದು ಪ್ರಧಾನಿ ಕಚೇರಿಯ ಗಮನಕ್ಕೂ ಬಂದಿದೆ. ಇದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಪ್ರಧಾನಿ ಮೋದಿ ಕೆಲವು ಮುಖ್ಯಮಂತ್ರಿಗಳು ಆಂತರಿಕ ಸಭೆಯ ನೇರಪ್ರಸಾರ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಕನಿಷ್ಠ ಸೈರಣೆ ಇರಬೇಕು ಎಂದಿದ್ದಾರೆ.
ಇನ್ನು, ಎಡವಟ್ಟು ಅರಿವಿಗೆ ಬರುತ್ತಿದ್ದಂತೇ ದೆಹಲಿ ಸಿಎಂ ಕಚೇರಿ ಸ್ಪಷ್ಟನೆ ನೀಡಿದೆ. ನೇರಪ್ರಸಾರ ಮಾಡಬಾರದು ಎಂಬ ಬಗ್ಗೆ ಕೇಂದ್ರದಿಂದ ಸೂಚನೆ ಬಂದಿರಲಿಲ್ಲ. ಹೀಗಾಗಿ ಅಚಾತುರ್ಯವಾಗಿದೆ. ಇದಕ್ಕೆ ವಿಷಾಧಿಸುತ್ತೇವೆ ಎಂದಿದೆ.