Select Your Language

Notifications

webdunia
webdunia
webdunia
webdunia

ಆಕ್ಸಿಜನ್ ಪೂರೈಕೆಗೆ ಭಾರತಕ್ಕೆ ಮಿತ್ರರಾಷ್ಟ್ರಗಳ ನೆರವು

ಆಕ್ಸಿಜನ್ ಪೂರೈಕೆಗೆ ಭಾರತಕ್ಕೆ ಮಿತ್ರರಾಷ್ಟ್ರಗಳ ನೆರವು
ನವದೆಹಲಿ , ಶನಿವಾರ, 24 ಏಪ್ರಿಲ್ 2021 (09:20 IST)
ನವದೆಹಲಿ: ಕೊರೋನಾ ರೋಗಿಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಪೂರೈಕೆಗೆ ಮಿತ್ರರಾಷ್ಟ್ರಗಳಿಂದ ಸಹಾಯ ಹಸ್ತ ಒದಗಿಬಂದಿದೆ.


ರಷ್ಯಾ, ಐರೋಪ್ಯ ಒಕ್ಕೂಟ, ಫ್ರಾನ್ಸ್ ನಿಂದ ಭಾರತಕ್ಕೆ ನೆರವು ಒದಗಿಬಂದಿದೆ. ರಷ್ಯಾ ಇನ್ನು 15 ದಿನಗಳಲ್ಲಿ ಆಮ್ಲಜನಕದ ಜೊತೆಗೆ ಕೊರೋನಾ ರೋಗಿಗಳಿಗೆ ಅಗತ್ಯವಾದ ರೆಮ್ ಡಿಸೀವರ್ ಇಂಜಕ್ಷನ್ ಔಷಧಿಯನ್ನೂ ನೀಡುವುದಾಗಿ ಹೇಳಿದೆ.

ಐರೋಪ್ಯ ರಾಷ್ಟ್ರಗಳು ಔಷಧದ ಜೊತೆಗೆ ಆಕ್ಸಿಜನ್ ಕಂಟೈನರ್ ಗಳನ್ನು ನೀಡಲು ಮುಂದೆ ಬಂದಿದೆ. ಫ್ರಾನ್ಸ್ ಯಾವುದೇ ನೆರವು ಬೇಕಾದರೂ ಕೊಡಲು ಸಿದ್ಧ ಎಂದು ಭರವಸೆ ನೀಡಿದೆ. ಇನ್ನು ಭಾರತೀಯ ಸೇನೆಯ ವೈದ್ಯಕೀಯ ಸೇವಾಸಂಸ್ಥೆ ವಿಮಾನಗಳು ಜರ್ಮನಿಯಿಂದ 23 ಸಂಚಾರಿ ಆಮ್ಲಜನಕ ಘಟಕಗಳನ್ನು ಭಾರತಕ್ಕೆ ತರಲಿವೆ. ಈ ಮೂಲಕ ಭಾರತದ ವಿಪತ್ತಿಗೆ ಮಿತ್ರರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಡವರಿಗೆ ಕೇಂದ್ರದಿಂದ 5 ಕೆಜಿ ಆಹಾರ ಧಾನ್ಯ ಉಚಿತ