Select Your Language

Notifications

webdunia
webdunia
webdunia
webdunia

ಕೊರೊನಾ ಸೋಂಕಿತೆಗೆ ಈ ರೀತಿಯಾಗಿ ಸಹಾಯ ಹಸ್ತ ಚಾಚಿದ ನಟ ಸೋನು ಸೂದ್

webdunia
ಹೈದರಾಬಾದ್ , ಶನಿವಾರ, 24 ಏಪ್ರಿಲ್ 2021 (06:59 IST)
ಹೈದರಾಬಾದ್ : ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಯುವತಿಯೊಬ್ಬಳನ್ನು ಶಸ್ತ್ರಚಿಕಿತ್ಸೆಗಾಗಿ ನಾಗ್ಪುರದಿಂದ ಹೈದರಾಬಾದ್ ಗೆ ಸ್ಥಳಾಂತರಿಸಲು ನಟ ಸೋನು ಸೂದ್ ಅವರು ಸಹಾಯ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಯುವತಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಅವಳ ಶ್ವಾಸಕೋಶ  90%ನಷ್ಟು ಹಾನಿಗೊಳಗಾಗಿತ್ತು. ಹಾಗಾಗಿ ಆಕೆಯನ್ನು ಹೈದರಾಬಾದ್ ನ ಅಪೊಲೊ ಆಸ್ಪತ್ರೆಯಲ್ಲಿ ಶ್ವಾಸಕೋಶ ಕಸಿ ಮಾಡುವ ಅಗತ್ಯವಿದೆ ಎಂದು ನಾಗ್ಪುರದ ವೋಕ್ ಹಾರ್ಡ್ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದಾರೆ.

ಈ ವಿಚಾರ ತಿಳಿದ ನಟ ಸೋನು ಸೂದ್ ಅವರು ತಮ್ಮ ಏರ್ ಆ್ಯಂಬುಲೆನ್ಸ್ ನಲ್ಲಿ ಆಕೆಯನ್ನು ಸ್ಥಳಾಂತರಿಸಲು ಸಹಾಯ ಮಾಡಿದ್ದಾರೆ. ಆಕೆಗೆ ಉತ್ತಮವಾಗಿ ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ತಕ್ ಜಗದೀಶ್’ ಚಿತ್ರ ಬಿಡುಗಡೆಯ ವಿಚಾರದಲ್ಲಿ ಅಸಮಾಧಾನಗೊಂಡ ನಟ ನಾನಿ