Publish Date: Fri, 23 Apr 2021 (11:37 IST)
Updated Date: Fri, 23 Apr 2021 (11:39 IST)
ಹೈದರಾಬಾದ್ : ತೆಲುಗು ನಟ ನಾಗಾರ್ಜುನ ಆಯೋಜಿಸಿದ್ದ ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ 4 ತೆಲುಗಿನ ಭಾರೀ ಯಶಸ್ಸಿನ ನಂತರ ನಿರ್ಮಾಪಕರು ಹೊಸ ಸೀಸನ್ ತರಲು ಸಜ್ಜಾಗಿದ್ದರು.
ಬಿಗ್ ಬಾಸ್ ಸೀಸನ್ 5 ಅನ್ನು ಮೇ ತಿಂಗಳಿನಿಂದ ಜೂನ್ ಮಧ್ಯವಾರದಲ್ಲಿ ಪ್ರಸಾರವಾಗಲಿದೆ ಎನ್ನಲಾಗಿತ್ತು. ಆದರೆ ಕೊರೊನಾ ವೈರಸ್ 2ನೇ ಅಲೆ ಕಾರಣದಿಂದ ಬಿಗ್ ಬಾಸ್ ಶೋ ಅನ್ನು ಮುಂದೂಡಲಾಗಿದೆಯಂತೆ.
ಇತ್ತೀಚಿನ ಮಾಹಿತಿ ಪ್ರಕಾರ ಮುಂದಿನ ಸೀಸನ್ ಅನ್ನು ಸೆಪ್ಟಂಬರ್ ಗೆ ಮುಂದೂಡಲಾಗಿದೆ ಮತ್ತು ಡಿಸೆಂಬರ್ ತಿಂಗಳೊಳಗೆ ಮುಕ್ತಾಯವಾಗಲಿದೆ ಎನ್ನಲಾಗಿದೆ.