Publish Date: Fri, 23 Apr 2021 (09:07 IST)
Updated Date: Fri, 23 Apr 2021 (10:05 IST)
ಹೈದರಾಬಾದ್ : ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ತಮ್ಮ ಮುಂಬರುವ ಚಿತ್ರ ಸರ್ಕಾರು ವಾರಿ ಪಾಟಾ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಆದರೆ ಇದೀಗ ಈ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆ.
ಕಾರಣವೇನೆಂದರೆ ಮಹೇಶ್ ಬಾಬು ಅವರ ಸರ್ಕಾರು ವಾರಿ ಪಾಟಾ ಚಿತ್ರತಂಡದ ನಾಲ್ವರು ಸದಸ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಮಹೇಶ್ ಬಾಬು ಅವರು ಅವರೊಂದಿಗೆ ನಿಕಟವಾಗಿದ್ದ ಕಾರಣ ಅವರು ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಅಲ್ಲದೇ ಕೆಲವು ದಿನಗಳ ಕಾಲ ವೈದ್ಯರು ಮಹೇಶ್ ಬಾಬು ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಹಾಗಾಗಿ ಒಂದು ವಾರದವರೆಗೆ ಚಿತ್ರದ ಚಿತ್ರೀಕರಣ ಪುನರಾರಂಭಿಸಲು ಸಾಧ್ಯವಿಲ್ಲ ಎನ್ನಲಾಗಿದೆ.