Select Your Language

Notifications

webdunia
webdunia
webdunia
webdunia

ನಮ್ಮ ನೆರವಿಗೆ ಭಾರತವಿತ್ತು, ಈಗ ಭಾರತದ ನೆರವಿಗೆ ನಾವಿದ್ದೇವೆ: ಅಮೆರಿಕಾ ಅಧ್ಯಕ್ಷ ಬಿಡೆನ್

webdunia
ಮಂಗಳವಾರ, 27 ಏಪ್ರಿಲ್ 2021 (10:40 IST)
ನ್ಯೂಯಾರ್ಕ್: ಅಮೆರಿಕಾದಲ್ಲಿ ಕೊರೋನಾ ಮಿತಿ ಮೀರಿದ್ದಾಗ ಭಾರತ ದೊಡ್ಡಣ್ಣನ ನೆರವಿಗೆ ಧಾವಿಸಿತ್ತು. ಈಗ ಭಾರತದಲ್ಲಿ ಕೊರೋನಾ ನಿಯಂತ್ರಣ ಮೀರಿರುವಾಗ ಅಮೆರಿಕಾ ಪ್ರತ್ಯುಪಕಾರ ಮಾಡಲು ಮುಂದಾಗಿದೆ.


ನಾವು ಕಷ್ಟದಲ್ಲಿದ್ದಾಗ ಭಾರತ ನೆರವಿಗೆ ಬಂದಿತ್ತು. ಈಗ ಭಾರತ ಕಷ್ಟದಲ್ಲಿದೆ. ಹೀಗಾಗಿ ನಾವು ಅವರ ನೆರವಿಗೆ ನಿಲ್ಲುತ್ತೇವೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

‘ನಾನು ಭಾರತ ಪ್ರಧಾನಿ ಮೋದಿ ಜೊತೆಗೆ ಮಾತುಕತೆ ನಡೆಸಿದ್ದೇನೆ. ನಾವಿಬ್ಬರೂ ಮಿತ್ರರಾಷ್ಟ್ರಗಳು ಕಷ್ಟದ ಸಮಯದಲ್ಲಿ ಪರಸ್ಪರ ಸಹಕಾರ ನೀಡಲು ಸದಾ ಸಿದ್ಧ. ಕೊವಿಡ್ ವಿರುದ್ಧ ಹೋರಾಡಲು ಭಾರತಕ್ಕೆ ಅಗತ್ಯವಿರುವ ಔಷಧ, ವೈದ್ಯಕೀಯ ಉಪಕರಣಗಳನ್ನು ಪೂರೈಸಲು ನಾವು ಸಿದ್ಧರಿದ್ದೇವೆ’ ಎಂದು ಬಿಡೆನ್ ಹೇಳಿಕೆ ನೀಡಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾದಿಂದ ಜನ ಸಾಯಲು ಚುನಾವಣಾ ಆಯೋಗವೇ ಕಾರಣ: ಮದ್ರಾಸ್ ಕೋರ್ಟ್ ಆಕ್ರೋಶ