ಪಾಟ್ನಾ: ಕೊರೋನಾ ಪಾಸಿಟಿವ್ ಬಂದಿದ್ದಕ್ಕೆ ಪತಿ ಮಹಾಶಯನೊಬ್ಬ ಪತ್ನಿಯ ತಲೆಯನ್ನೇ ಕತ್ತರಿಸಿ ತಾನೂ ಸ್ವಯಂ ಹತ್ಯೆ ಮಾಡಿಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ.
ರೈಲ್ವೇ ಇಲಾಖೆಯಲ್ಲಿ ನೌಕರನಾಗಿದ್ದ ವ್ಯಕ್ತಿ ಇಂತಹ ಹೀನಾಯ ಕೃತ್ಯ ನಡೆಸಿದ್ದಾನೆ. ಪತ್ನಿಗೆ ಕೊರೋನಾ ಪಾಸಿಟಿವ್ ವರದಿ ನೋಡಿ ಆರೋಪಿ ಪತಿ ಗಾಬರಿಯಾಗಿದ್ದಾನೆ.
ಇದೇ ಸ್ಥಿತಿಯಲ್ಲಿ ಆಕೆಯ ತಲೆ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ತಾನು ನೆಲೆಸುತ್ತಿದ್ದ ಅಪಾರ್ಟ್ ಮೆಂಟ್ ಟೆರೇಸ್ ನಿಂದ ಜಿಗಿದು ಸ್ವಯಂ ಹತ್ಯೆ ಮಾಡಿದ್ದಾನೆ.