Publish Date: Wed, 21 Apr 2021 (10:19 IST)
Updated Date: Wed, 21 Apr 2021 (10:21 IST)
ಅಹಮ್ಮದಾಬಾದ್: ಮಹಿಳೆಯ ಮೇಲೆ ಗುಂಪು ಮಾನಭಂಗ ಮಾಡಿ ಹತ್ಯೆ ಮಾಡಿದ ದುರುಳರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ಏಪ್ರಿಲ್ 17 ರಂದು ಈ ಘಟನೆ ನಡೆದಿತ್ತು. ಮೂವರು ಕಾಮುಕರು 25 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು. ಬಳಿಕ ಆಕೆಯನ್ನು ಹತ್ಯೆ ಮಾಡಿತ್ತು.
ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯನ್ನು ಅಪಹರಿಸಿದ್ದ ದುಷ್ಕರ್ಮಿಗಳು ತಮ್ಮ ಮನೆಗೆ ಕರೆದೊಯ್ದು ಡ್ರಗ್ ನೀಡಿ ಗುಂಪು ಮಾನಭಂಗ ಮಾಡಿದ್ದಲ್ಲದೆ, ಆಕೆಯ ಮೇಲೆ ಹಲ್ಲೆ ನಡೆಸಿ ಕೊಂದಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.