Select Your Language

Notifications

webdunia
webdunia
webdunia
webdunia

ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ಈ ಯುವಕ ಪೊಲೀಸರಿಗೆ ಮಾಡಿದ್ದೇನು ಗೊತ್ತಾ?!

ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ್ದಕ್ಕೆ ಈ ಯುವಕ ಪೊಲೀಸರಿಗೆ ಮಾಡಿದ್ದೇನು ಗೊತ್ತಾ?!
ರಾಯ್ಪುರ , ಗುರುವಾರ, 22 ಏಪ್ರಿಲ್ 2021 (10:07 IST)
ರಾಯ್ಪುರ: ಮಾಸ್ಕ್ ಹಾಕಿಲ್ಲವೇಕೆಂದು ಪೊಲೀಸರು ಪ್ರಶ್ನಿಸಿದ್ದಕ್ಕೆ ದ್ವಿಚಕ್ರ ವಾಹನ ಚಾಲಕನೊಬ್ಬ ಪೊಲೀಸರಿಗೇ ಧಮ್ಕಿ ಹಾಕಿದ ಘಟನೆ ರಾಯ್ಪುರದಲ್ಲಿ ನಡೆದಿದೆ.


ಓರ್ವ ಹಿಂಬದಿ ಸವಾರನೂ ಜೊತೆಗಿದ್ದ. ಆತ ಮಾಸ್ಕ್ ಧರಿಸಿದ್ದ. ಆದರೆ ಚಾಲನೆ ಮಾಡುತ್ತಿದ್ದ ಯುವಕ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಪೊಲೀಸರು ಪ್ರಶ್ನಿಸಿದಾಗ ತಾನು ರಾಯ್ಪುರ ಮೇಯರ್ ನ ಅಳಿಯ. ನಿಮ್ಮನ್ನೇ ಸಸ್ಪೆಂಡ್ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಇದಕ್ಕೆ ಪೊಲೀಸರು ಸೊಪ್ಪು ಹಾಕಿಲ್ಲ. ಬದಲಿಗೆ 500 ದಂಡ ವಿಧಿಸಿ ರಸೀತಿ ಸಮೇತ ಯುವಕನನ್ನು ಕಳುಹಿಸಿಕೊಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮರ್ಯಾದಾ ಪುರುಷೋತ್ತಮ ಶ್ರೀರಾಮನವಮಿಗೆ ಶುಭ ಕೋರಿ ಟ್ರೋಲ್ ಆದ ರಮೇಶ್ ಜಾರಕಿಹೊಳಿ