Publish Date: Mon, 26 Apr 2021 (10:32 IST)
Updated Date: Mon, 26 Apr 2021 (10:33 IST)
ಲಕ್ನೋ: ಮೃತ ತಂದೆಯ ಶರೀರವನ್ನು ಸಾಗಿಸಲು ಆಂಬ್ಯುಲೆನ್ಸ್ ಸಿಗದೇ ವ್ಯಕ್ತಿಯೊಬ್ಬ ಕಾರಿನ ಟಾಪ್ ಮೇಲೆ ಕಟ್ಟಿ ಸ್ಮಶಾನಕ್ಕೆ ಕರೆದೊಯ್ದ ಮನಕಲಕುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕೊರೋನಾದಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಆಂಬ್ಯುಲೆನ್ಸ್ ಗಳ ಕೊರತೆಯಾಗಿದೆ. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೇ ಬೇಸತ್ತ ಪುತ್ರ ಈ ಕೆಲಸ ಮಾಡಿದ್ದಾನೆ.
ಕಾರಿನ ಟಾಪ್ ಮೇಲೆ ಮೃತಶರೀರವನ್ನು ಕಟ್ಟಿ ಸ್ಮಶಾನಕ್ಕೆ ಕರೆದೊಯ್ದು, ಅಂತಿಮ ಸಂಸ್ಕಾರ ನೆರವೇರಿಸಿದ್ದಾನೆ. ಆಂಬ್ಯುಲೆನ್ಸ್ ಗಾಗಿ ಆರೇಳು ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೇರೆ ದಾರಿ ಕಾಣದೇ ಈ ಕೆಲಸ ಮಾಡಿದ್ದಾನೆ. ಆದರೆ ಇದೀಗ ವಿಪಕ್ಷಗಳಿಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಸಿಕ್ಕ ಅಸ್ತ್ರದಂತಾಗಿದೆ.