Publish Date: Sat, 11 May 2019 (07:37 IST)
Updated Date: Sat, 11 May 2019 (07:40 IST)
ಕಾಂಬೋಡಿಯಾ : ಸುಂದರವಾಗಿ ಕಾಣಿಸಬೇಕೆಂದು ಹುಡುಗಿಯರು ಫೇಸ್ ಪ್ಯಾಕ್, ಫೇಸ್ ಕ್ರೀಂ ಮುಂತಾದವುಗಳನ್ನು ಹಚ್ಚಿಕೊಂಡು ಏನೆಲ್ಲಾ ಕಸರತ್ತು ಮಾಡುತ್ತಾರೆ. ಆದರೆ ಕಾಂಬೋಡಿಯನ್ ನಟಿಯೊಬ್ಬಳಿಗೆ ಅವಳು ಸುಂದರವಾಗಿರುವುದೇ ಮಹಾ ಅಪರಾಧವಾಗಿದೆ.
ಹೌದು. ಕಾಂಬೋಡಿಯನ್ ನಟಿ 26 ವರ್ಷದ ಡೆನಿ ನಾನ್ ಎಂಬಾಕೆಗೆ ಅಗತ್ಯಕ್ಕಿಂತ ಹೆಚ್ಚು ಸುಂದರವಾಗಿದ್ದಾಳೆ ಎಂಬ ಕಾರಣಕ್ಕೆ ಅಲ್ಲಿನ ಸರ್ಕಾರ ಒಂದು ವರ್ಷದ ನಿಷೇಧ ಹೇರುವುದರ ಮೂಲಕ ಆಕೆಗೆ ಶಿಕ್ಷೆ ವಿಧಿಸಿದೆ. ಈ ಬಗ್ಗೆ ಕಾಂಬೋಡಿಯನ್ ಸಂಸ್ಕೃತಿ ಮತ್ತು ಕಲೆ ಸಚಿವಾಲಯ ತಿಳಿಸಿದೆ.
ಡೆನ್ನಿ ಫೋಟೋಗಳು ದೇಶದ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತವೆಯಂತೆ. ಡೆನ್ನಿ ಫೇಸ್ಬುಕ್ ಪೇಜ್ ಹೊಂದಿದ್ದು, ಅದ್ರಲ್ಲಿ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ನಿಷೇಧಕ್ಕೊಳಗಾಗುವಂತಹ ಯಾವುದೇ ಕೆಲಸ ಮಾಡಿಲ್ಲವೆಂದು ಡೆನ್ನಿ ಹೇಳಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.