Select Your Language

Notifications

webdunia
webdunia
webdunia
webdunia

ಮೊಟ್ಟೆಯ ಸಿಪ್ಪೆಯಿಂದ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಹೇಗೆ ಗೊತ್ತಾ?

ಮೊಟ್ಟೆಯ ಸಿಪ್ಪೆಯಿಂದ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಹೇಗೆ ಗೊತ್ತಾ?
ಬೆಂಗಳೂರು , ಗುರುವಾರ, 2 ಮೇ 2019 (06:36 IST)
ಬೆಂಗಳೂರು : ಮೊಟ್ಟೆಯನ್ನು ಆಮ್ಲೇಟ್ ಮಾಡಿದ ಮೇಲೆ ಅದರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ ಇನ್ನುಮುಂದೆ ಹಾಗೆ ಮಾಡಬೇಡಿ. ಯಾಕೆಂದರೆ ಮೊಟ್ಟೆಯ ಸಿಪ್ಪೆಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.




ಮೊಟ್ಟೆಯ ಸಿಪ್ಪೆಯಲ್ಲಿ  750-800 ಮಿ.ಗ್ರಾಂ ಕ್ಯಾಲ್ಸಿಯಂ ಇದೆ. ತ್ವಚೆ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ನಯವಾದ ಚರ್ಮವು ಬರುವಂತೆ ಮಾಡುವುದು. ಕಲೆ ಹಾಗೂ ಬಿಸಿಲಿನ ಸುಟ್ಟ ಕಲೆಗಳನ್ನು ತೆಗೆದು ಚರ್ಮದ ಕಾಂತಿ ವೃದ್ಧಿಸುವುದು.


2 ಮೊಟ್ಟೆಯ ಸಿಪ್ಪೆಯನ್ನು ಹುಡಿ ಮಾಡಿ ಮತ್ತು ಇದಕ್ಕೆ ಒಂದು ಅರ್ಧ ಪಿಂಗಾಣಿಯಷ್ಟು ಆಪಲ್ ಸೀಡರ್ ವಿನೇಗರ್ ಹಾಕಿ. ಐದು ದಿನಗಳ ಕಾಲ ಹಾಗೆ ನೆನೆಯಲು ಬಿಡಿ. ನಂತರ ಒಂದು ಹತ್ತಿ ಉಂಡೆಯನ್ನು ಇದರಲ್ಲಿ ಅದ್ದಿಕೊಳ್ಳಿ ಮತ್ತು ಅದನ್ನು ತ್ವಚೆಗೆ ಹಚ್ಚಿಕೊಳ್ಳಿ. ಕೆಲವು ನಿಮಿಷ ಕಾಲ ಹಾಗೆ ಬಿಡಿ ಬಳಿಕ ತೊಳೆಯಿರಿ. ಹೀಗೆ ವಾರದಲ್ಲಿ 2 ಸಲ ಮಾಡಿ. ಇದು ನೆರಿಗೆ ಮತ್ತು ಗೆರೆ ಮೂಡುವುದನ್ನು ತಡೆಯುವುದು, ಅಲ್ಲದೇ ಕಪ್ಪು ಕಲೆ ನಿವಾರಣೆ ಮಾಡುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಚ್ಚರ! ಈ ನಿದ್ರಾ ಸಮಸ್ಯೆಗಳು ಜೀವಕ್ಕೆ ಅಪಾಯವನ್ನು ತರಬಹುದು