Publish Date: Wed, 17 Apr 2019 (07:46 IST)
Updated Date: Wed, 17 Apr 2019 (07:47 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿ ಸೌಂದರ್ಯ ರಜನೀಕಾಂತ್ ಇತ್ತೀಚೆಗಷ್ಟೇ ಉದ್ಯಮಿ ವಿಶಾಖನ್ ಜತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಸೌಂದರ್ಯ ಮತ್ತು ವಿಶಾಖನ್ ಗೆ ಇದು ಎರಡನೇ ವಿವಾಹವಾಗಿದೆ. ಸೌಂದರ್ಯಗೆ ಈಗಾಗಲೇ ಓರ್ವ ಪುತ್ರನಿದ್ದಾನೆ. ಈ ವಿವಾಹದ ಬಗ್ಗೆ ಸಂದರ್ಶನವೊಂದರಲ್ಲಿ ಸೌಂದರ್ಯ ಮಾತನಾಡಿದ್ದಾರೆ.
ತನ್ನ ಪುತ್ರನನ್ನು ಪತಿ ವಿಶಾಖನ್ ಹೇಗೆ ನೋಡಿಕೊಳ್ಳುತ್ತಾನೆ ಎಂಬ ಬಗ್ಗೆ ಸೌಂದರ್ಯ ಬಹಿರಂಗಪಡಿಸಿದ್ದಾರೆ. ‘ವೇದ್ ಬಗ್ಗೆ ವಿಶಾಖನ್ ಪ್ರೊಟೆಕ್ಟಿವ್. ನಮ್ಮ ಮದುವೆಯಲ್ಲಿ ವೇದ್ ಮಂಟಪಕ್ಕೆ ಬರುವವರೆಗೂ ತಾಳಿ ಕಟ್ಟುವುದಿಲ್ಲ ಎಂದು ವಿಶಾಖನ್ ಹಠ ಹಿಡಿದಿದ್ದರು. ಕೊನೆಗೆ ವೇದ್ ಸಮ್ಮುಖದಲ್ಲೇ ನಾವು ಮದುವೆಯಾದೆವು’ ಎಂದು ಸೌಂದರ್ಯ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ