Publish Date: Wed, 17 Apr 2019 (07:04 IST)
Updated Date: Wed, 17 Apr 2019 (07:05 IST)
ಮಂಡ್ಯ: ಸುಮಲತಾ ಅಂಬರೀಶ್ ಸ್ವಾಭಿಮಾನ ರ್ಯಾಲಿಯಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ನಾನು ಜೆಡಿಎಸ್ ಕಳ್ಳರ ಪಕ್ಷ ಎಂದಿಲ್ಲ ಎಂದಿದ್ದಾರೆ.
ಜೆಡಿಎಸ್ ಕಳ್ಳರ ಪಕ್ಷ ಎಂದು ನನ್ನ ಬಗ್ಗೆ ಸುಳ್ಳೇ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ನಾನು ಹಾಗೆ ಹೇಳಿದ್ದು ಸತ್ಯ ಎಂದಾದರೆ ನಾನು ಅತೀ ಹೆಚ್ಚು ನಂಬುವ ಧರ್ಮಸ್ಥಳ ಮಂಜುನಾಥ ದೇವರ ಮೇಲಾಣೆ ಮಂಡ್ಯ, ಯಾಕೆ ಕರ್ನಾಟಕವನ್ನೇ ಬಿಡ್ತೀನಿ, ಸಿನಿಮಾ ರಂಗವನ್ನೇ ಬಿಡ್ತೀನಿ ಎಂದು ಯಶ್ ಗುಡುಗಿದ್ದಾರೆ.
ನಾನು ನಿಮ್ಮ ಹಾಗೆ ಸುಮ್ ಸುಮ್ನೇ ಆಣೆ ಮಾಡಲ್ಲ. ಅದರ ಬಗ್ಗೆ ನಾನಿಲ್ಲಿ ಹೆಚ್ಚು ಹೇಳಬೇಕಿಲ್ಲ ಬಿಡಿ. ಅವರವರಿಗೆ ಗೊತ್ತಿರುತ್ತದೆ. ಆದರೆ ಸುಮ್ ಸುಮ್ನೇ ಕಾರ್ಯಕರ್ತರು ಹಾಗೆ ಮಾಡ್ತಾರೆ ಹೀಗೆ ಮಾಡ್ತಾರೆ ಎಂದು ನಮಗೇ ಎಚ್ಚರಿಕೆ ಕೊಡ್ತಾರೆ. ಯಾರ್ರೀ ಕಾರ್ಯಕರ್ತರು? ಅವರು ಈ ಮಂಡ್ಯದ ಜನತೆ ಅಲ್ವಾ? ಅವರಿಗೆಲ್ಲಾ ಗೊತ್ತು ಎಂದು ಯಶ್ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ