Select Your Language

Notifications

webdunia
webdunia
webdunia
webdunia

ನಾನೂ ಅಳಬೇಕೆಂದಿದ್ದೇನೆ ಆದ್ರೆ ಕಣ್ಣೀರು ಬರ್ತಿಲ್ಲ ಎಂದ SMK

ನಾನೂ ಅಳಬೇಕೆಂದಿದ್ದೇನೆ ಆದ್ರೆ ಕಣ್ಣೀರು ಬರ್ತಿಲ್ಲ ಎಂದ SMK
ಬೆಂಗಳೂರು , ಮಂಗಳವಾರ, 16 ಏಪ್ರಿಲ್ 2019 (19:14 IST)
ಕೆಲವರಿಗೆ ಸಲೀಸಾಗಿ ಕಣ್ಣೀರು ಬರುತ್ತದೆ. ಹಾಗಾಗಿ ಅವರು ಸಿಕ್ಕಾಗ ಒಮ್ಮೆ ಅವರನ್ನೇ ಕೇಳಿ ಕಣ್ಣೀರಿನ ರಹಸ್ಯ ಏನು ಎಂದು ತಿಳಿದುಕೊಳ್ಳಬೇಕು ಎಂದುಕೊಂಡಿದ್ದೇನೆ. ಹೀಗಂತ ಬಿಜೆಪಿ ಹಿರಿಯ ಮುಖಂಡ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಐಟಿ, ಇಡಿ ಸುಖಾಸುಮ್ಮನೆ ದಾಳಿ ನಡೆಸುವುದಿಲ್ಲ. ಅವರೂ ಸಹ ಸಾಕಷ್ಟು ಮಾಹಿತಿ ಸಂಗ್ರಹಿಸಿಯೇ ದಾಳಿ ನಡೆಸುತ್ತಿದ್ದಾರೆ. ದಾಳಿಯ ವೇಳೆ ಕೊಟ್ಯಂತರ ರೂಪಾಯಿ ಸಿಗುತ್ತಿಲ್ಲವಾ? ಇಡಿ, ಐಟಿ ಗೆ ಅವರ ಕೆಲಸ ಮಾಡಲು ಬಿಡಿ. ಹಿಗಂತ ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ಇನ್ನು, ನಾನೂ ಕೂಡ ಕಣ್ಣೀರು ಹಾಕಬೇಕು ಎಂದು ಪ್ರಯತ್ನಿಸುತ್ತೇನೆ. ಆದರೆ ಕಣ್ಣೀರು ಬರುವುದೇ ಇಲ್ಲ. ಆದರೆ ಕೆಲವರಿಗೆ ಸಲೀಸಾಗಿ ಕಣ್ಣೀರು ಬರುತ್ತದೆ. ಹಾಗಾಗಿ ಅವರು ಸಿಕ್ಕಾಗ ಒಮ್ಮೆ ಅವರನ್ನೇ ಕೇಳಿ ಕಣ್ಣೀರಿನ ರಹಸ್ಯ ಏನು ಎಂದು ತಿಳಿದುಕೊಳ್ಳಬೇಕು ಎಂದುಕೊಂಡಿದ್ದೇನೆ ಅಂತ ಸಿಎಂಗೆ ಛಾಟಿ ಬೀಸಿದ್ರು.

ಬಹುಶಃ ಅವರ ಹೃದಯ ಮಿಡಿಯುತ್ತದೆ. ಒಬ್ಬ ತಂದೆಯ ಹೃದಯ ಮಕ್ಕಳಿಗಾಗಿ ಅಷ್ಟೂ ಮಿಡಿಯದೇ ಇದ್ದರೆ ಹೇಗೆ? ಹಾಗಾಗಿ ಅವರಿಗೆ ಕಣ್ಣೀರು ಸಲೀಸಾಗಿ ಬರುತ್ತದೆ ಅಂತ ಕೃಷ್ಣ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಹೆಚ್.ಮುನಿಯಪ್ಪ ವಿರುದ್ಧ ಸಿಡಿ ಬಿಡುಗಡೆ; ಅದ್ರಲ್ಲೇನಿದೆ?