Publish Date: Fri, 12 Apr 2019 (07:48 IST)
Updated Date: Fri, 12 Apr 2019 (07:50 IST)
ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆದಿದೆ. ಆದರೆ ನಟಿ ಸಮಂತಾ ಅಕ್ಕಿನೇನಿ ಟಿಡಿಪಿ ಅಭ್ಯರ್ಥಿಯೊಬ್ಬರನ್ನು ಬೆಂಬಲಿಸಿ, ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.
ವಿಡಿಯೋ ಮೂಲಕ ಟಿಡಿಪಿ ಎಂಎಲ್ಎ ಅಭ್ಯರ್ಥಿ ಸತ್ಯ ಪ್ರಸಾದ್ ಪರವಾಗಿ ಸಮಂತಾ ಮತ ನೀಡುವಂತೆ ಮನವಿ ಮಾಡಿದ್ದಕ್ಕೆ ಟ್ವಿಟರಿಗರು ನಿಮಗೆ ಇದೆಲ್ಲಾ ಬೇಡ. ಸುಮ್ಮನೇ ನಿಮ್ಮ ವೃತ್ತಿ ಜೀವನ ಹಾಳು ಮಾಡಿಕೊಳ್ಳಬೇಡಿ. ಸತ್ಯ ಪ್ರಸಾದ್ ಗೂ ಏನು ಸಂಬಂಧ ಎಂದೆಲ್ಲಾ ಟ್ವಿಟರಿಗರು ಟ್ರೋಲ್ ಮಾಡಿದ್ದರು.
ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಸಮಂತಾ ‘ಹೌದು ಸತ್ಯ ಪ್ರಸಾದ್ ನಮ್ಮ ಫ್ಯಾಮಿಲಿ ಫ್ರೆಂಡ್. ಅವರ ಸಹೋದರಿಯೂ ನನಗೆ ಗೊತ್ತು. ಅವರನ್ನು ವೈಯಕ್ತಿವಾಗಿ ನನಗೆ ಗೊತ್ತು. ಅವರು ಒಳ್ಳೆಯವರು. ಅದಕ್ಕೆ ಅವರನ್ನು ಬೆಂಬಲಿಸುತ್ತಿದ್ದೇನೆ’ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ