Select Your Language

Notifications

webdunia
webdunia
webdunia
webdunia

ಸಿಎಂ ಕುಮಾರಸ್ವಾಮಿಗೆ ಡಿ ಬಾಸ್ ದರ್ಶನ್ ಥ್ಯಾಂಕ್ಸ್ ಹೇಳಿದ್ದೇನು ಗೊತ್ತಾ?!

ಸಿಎಂ ಕುಮಾರಸ್ವಾಮಿಗೆ ಡಿ ಬಾಸ್ ದರ್ಶನ್ ಥ್ಯಾಂಕ್ಸ್ ಹೇಳಿದ್ದೇನು ಗೊತ್ತಾ?!
ಮಂಡ್ಯ , ಬುಧವಾರ, 17 ಏಪ್ರಿಲ್ 2019 (07:07 IST)
ಮಂಡ್ಯ: ಸುಮಲತಾ ಅಂಬರೀಶ್ ಪರ ಸ್ವಾಭಿಮಾನ ರ್ಯಾಲಿಯಲ್ಲಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಎಂ ಕುಮಾರಸ್ವಾಮಿಗೆ ಧನ್ಯವಾದ ಸಲ್ಲಿಸಿದ್ದಾರೆ.


ಪ್ರಚಾರದ ವೇಳೆ ಸಿಎಂ ಕುಮಾರಸ್ವಾಮಿ ದರ್ಶನ್ ವಿರುದ್ಧ ಕಿಡಿ ಕಾರಿದ್ದರು. ಡಿ ಬಾಸ್ ಎಂದು ವ್ಯಂಗ್ಯ ಮಾಡಿದ್ದರು. ಆದರೆ ಆಗೆಲ್ಲಾ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸದ ದರ್ಶನ್ ಈಗ ಕೊನೆಯ ಸಮಾವೇಶದಲ್ಲಿ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.

‘ಕುಮಾರಸ್ವಾಮಿಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ. ಯಾಕೆಂದರೆ ಡಿ ಬಾಸ್ ಎಂದು ಕೆಲವರಿಗೆ ಮಾತ್ರ ಗೊತ್ತಿತ್ತೇನೋ. ಆದರೆ ಕುಮಾರಸ್ವಾಮಿಯವರು ಯಾವಾಗ ಆ ಹೆಸರು ಹೇಳಿದರೂ ಈಗ ಇಡೀ ರಾಜ್ಯದ ಜನರಿಗೆ ಡಿ ಬಾಸ್ ಎಂದರೆ ಯಾರು ಎಂದು ಗೊತ್ತಾಗಿದೆ’ ಎಂದು ದರ್ಶನ್ ಹೇಳುತ್ತಿದ್ದಂತೇ ನೆರೆದಿದ್ದ ಅಭಿಮಾನಿಗಳು ಶಿಳ್ಳೆ ಹೊಡೆದು ಖುಷಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ದೇವರ ಮೇಲಾಣೆ ನಾನು ಹಾಗೆ ಹೇಳಿದ್ರೆ ಸಿನಿಮಾ ಬಿಡ್ತೀನಿ ಎಂದ್ರು ಯಶ್