ಬೆಂಗಳೂರು: ಗರ್ಭಿಣಿಯಾಗಿದ್ದಾಗ ಲೈಂಗಿಕ ಕ್ರಿಯೆ ನಡೆಸುವುದು ಸುರಕ್ಷಿತವೇ ಎಂಬ ಅನುಮಾನಗಳು ಹಲವರಿಗಿರುತ್ತದೆ. ಆದರೆ ಈ ಸಮಯದಲ್ಲಿ ಮಹಿಳೆಗೆ ಲೈಂಗಿಕ ಬಯಕೆ ಹೆಚ್ಚು ಕಾಡುವ ಸಾಧ್ಯತೆಗಳೂ ಇರುತ್ತವೆ.
ಹಾಗಿದ್ದಾಗ ಏಳು ತಿಂಗಳ ತುಂಬು ಗರ್ಭಿಣಿಯಾದ ಮೇಲೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಮಗುವಿಗೆ ಅಪಾಯವಾದರೆ ಎಂಬ ಆತಂಕವೂ ಕಾಡುತ್ತದೆ.
ಗರ್ಭಿಣಿಯರು ತಮ್ಮ ಆರೋಗ್ಯ ಸಹಜವಾಗಿದ್ದು, ವೈದ್ಯರ ಬಳಿ ಸಲಹೆ ಪಡೆದು ಮಗು, ಹಾಗೂ ತಮಗೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ನಾರ್ಮಲ್ ಆಗಿದೆ ಎಂದಾದರೆ ಹೊಟ್ಟೆ ಮೇಲೆ ಮತ್ತು ಗುಪ್ತಾಂಗದ ಮೇಲೆ ಹೆಚ್ಚು ಒತ್ತಡ ಬೀಳದಂತೆ ಲೈಂಗಿಕ ಕ್ರಿಯೆ ನಡೆಸುವುದಕ್ಕೆ ತೊಂದರೆಯೇನೂ ಇಲ್ಲ ಎಂದು ತಜ್ಞರೇ ಹೇಳುತ್ತಾರೆ.