Publish Date: Fri, 02 Aug 2019 (09:03 IST)
Updated Date: Fri, 02 Aug 2019 (09:05 IST)
ಬೆಂಗಳೂರು: ಗರ್ಭನಿರೋಧಕ ಕಾಪರ್ ಟಿ ಬಳಸಿಕೊಂಡರೆ ಕೆಲವರು ಹಲವು ಇತರ ಅಡ್ಡ ಪರಿಣಾಮಗಳ ಬಗ್ಗೆ ದೂರುತ್ತಾರೆ. ಅದರಲ್ಲೂ ಮುಖ್ಯವಾಗಿ ಸೊಂಟ ನೋವು ಮತ್ತು ಬಿಳಿಮುಟ್ಟಿನ ಸಮಸ್ಯೆ.
ಕಾಪರ್ ಟಿ ಅತ್ಯಂತ ಸುರಕ್ಷಿತ ಗರ್ಭನಿರೋಧಕ. ಹಾಗಿದ್ದರೂ ಕೆಲವರಿಗೆ ಇಂತಹ ಅಡ್ಡ ಪರಿಣಾಮಗಳುಂಟಾದರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಯಾಕೆಂದರೆ ಕೆಲವೊಮ್ಮೆ ಸರಿಯಾಗಿ ಅಳವಡಿಸದೇ ಹೋದರೆ ಅಥವಾ ಅದು ನಿಮಗೆ ಸೆಟ್ ಆಗದೇ ಇದ್ದಾಗ ಸೋಂಕು ಇತ್ಯಾದಿ ತಗುಲುವುದರಿಂದ ಬಿಳಿ ಮುಟ್ಟು, ನೋವಿನ ಸಮಸ್ಯೆ ಬರಬಹುದು.