Select Your Language

Notifications

webdunia
webdunia
webdunia
webdunia

ವರ್ಕ್ ಫ್ರಂ ಹೋಮ್ ನಿಂದ ಯುವಕರನ್ನು ಕಾಡ್ತಿದೆ ಈ ಸಮಸ್ಯೆ

ವರ್ಕ್ ಫ್ರಂ ಹೋಮ್ ನಿಂದ ಯುವಕರನ್ನು ಕಾಡ್ತಿದೆ ಈ ಸಮಸ್ಯೆ
ಬೆಂಗಳೂರು , ಶುಕ್ರವಾರ, 1 ಅಕ್ಟೋಬರ್ 2021 (11:50 IST)
ಕೊರೊನಾ, ಇಡೀ ಜಗತ್ತಿನ ಜನರ ಕೆಲಸದ ವಿಧಾನವನ್ನು ಬದಲಿಸಿದೆ. ಕಚೇರಿಗೆ ಹೋಗಿ ಕೆಲಸ ಮಾಡುವ ಜನರಿಗಿಂತ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
Photo Courtesy: Google

ಕೊರೊನಾದಿಂದ ರಕ್ಷಣೆ ನೀಡಲು, ಕಂಪನಿಗಳು ವರ್ಕ್ ಫ್ರಂ ಹೋಮ್ ಆಯ್ಕೆ ನೀಡಿವೆ. ಆದ್ರೆ ವರ್ಕ್ ಫ್ರಂ ಹೋಮ್ ಕೆಲಸ ಉದ್ಯೋಗಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದೀರ್ಘಕಾಲದ ಕಂಪ್ಯೂಟರ್ ಮುಂದೆ ಕೆಲಸ ಮಾಡುವ ಕಾರಣ, ಜನರ ಆರೋಗ್ಯ ಹದಗೆಡುತ್ತಿದೆ. ಹೃದಯ ರೋಗ ಮತ್ತು ಪಾರ್ಶ್ವವಾಯು ಹೆಚ್ಚಾಗಿ ಕಾಡ್ತಿದೆ. ಇದ್ರಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅಂದಾಜಿನ ಪ್ರಕಾರ, 2016 ರಲ್ಲಿ ಕೆಲಸದ ಸಮಯದಿಂದಾಗಿ ಪಾರ್ಶ್ವವಾಯು ಮತ್ತು ಹೃದ್ರೋಗದಿಂದ ಸುಮಾರು 7,45,000 ಸಾವು ಸಂಭವಿಸಿದೆ. ಇದು 2000 ವರ್ಷಕ್ಕಿಂತ ಶೇಕಡಾ 29 ರಷ್ಟು ಹೆಚ್ಚಾಗಿದೆ.
ಮನೆಯಿಂದ ಕೆಲಸ ಮಾಡುವುದು ಕೂಡ ಸಮಸ್ಯೆಯಾಗುತ್ತಿದೆ ಎಂದು ವೈದ್ಯರು ಹೇಳ್ತಿದ್ದಾರೆ. ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು, ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗೆ ಕೆಲಸದ ಸಮಯ ಹೆಚ್ಚಾಗಿದೆ. ಇದ್ರಿಂದ ಒತ್ತಡವೂ ಹೆಚ್ಚಾಗಿದೆ. ಕೆಲಸಕ್ಕೆ ಹೆಚ್ಚು ಸಮಯ ನೀಡ್ತಿರುವ ಕಾರಣ, ಅನಾರೋಗ್ಯಕರ ಆಹಾರ, ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ ಮತ್ತು ನಿದ್ರಾಹೀನತೆ, ಒತ್ತಡಕ್ಕೆ ಕಾರಣವಾಗ್ತಿದೆ.
ಮನೆಯಿಂದ ಕೆಲಸ ಮಾಡುವ ಜನರು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪ್ರತಿದಿನ ತಾಜಾ ಹಣ್ಣುಗಳು ಮತ್ತು ಹಸಿರು ತರಕಾರಿಗಳನ್ನು ತಿನ್ನಬೇಕು. ಪ್ರತಿದಿನ ಸರಿಯಾಗಿ ನಿದ್ರೆ ಮಾಡಬೇಕು. ಮಲಗುವ ಮೊದಲು, ಮೊಬೈಲ್, ಕಂಪ್ಯೂಟರ್ ವೀಕ್ಷಣೆ ಮಾಡಬಾರದು. ರಾತ್ರಿಯಲ್ಲಿ ಹೆಚ್ಚು ಊಟ ಮಾಡಬಾರದು. ಕೆಲಸಕ್ಕೆ ಸರಿಯಾದ ಸಮಯ ನಿಗದಿಪಡಿಸಬೇಕು. ಕುಟುಂಬ ಮತ್ತು ಮನೆ ಕೆಲಸಗಳಿಗೂ ಸಮಯ ನೀಡಬೇಕು. ಪ್ರತಿದಿನ 30-45 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಸಾಕಷ್ಟು ನೀರು ಸೇವನೆ ಮಾಡಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ಗುಣವಾಯ್ತಾ? ಹಾರ್ಟ್ ಚೆಕಪ್ ಮಾಡಿಸದಿದ್ರೆ ಅಪಾಯ ಇನ್ನೂ ಇದೆ!