Select Your Language

Notifications

webdunia
webdunia
webdunia
webdunia

ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾದರೆ ಈ ಸಮಸ್ಯೆಗಳು ಉಂಟಾಗುತ್ತದೆ..

ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾದರೆ ಈ ಸಮಸ್ಯೆಗಳು ಉಂಟಾಗುತ್ತದೆ..
ಬೆಂಗಳೂರು , ಬುಧವಾರ, 29 ಸೆಪ್ಟಂಬರ್ 2021 (07:31 IST)
Health Tips : ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಸಕಾಲದಲ್ಲಿ ನಿರ್ವಹಿಸದಿದ್ದರೆ, ಅಪಧಮನಿಗಳಲ್ಲಿ ಅಡಚಣೆ ಉಂಟಾಗಬಹುದು, ಇದರಿಂದಾಗಿ ಹೃದಯಾಘಾತ ಅಥವಾ ಪಾಶ್ರ್ವವಾಯು ಉಂಟಾಗುತ್ತದೆ.

ಮೊಣಕೈಗಳು, ಮೊಣಕಾಲುಗಳು, ಕೈಗಳು, ಪಾದಗಳು ಅಥವಾ ಕೆಲವೊಮ್ಮೆ ಮೂಗಿನ ಸುತ್ತಲೂ ಸಣ್ಣ, ಮೃದುವಾದ, ಹಳದಿ ಅಥವಾ ಕೆಂಪು ಬಣ್ಣದ ಗಂಟಿನ ರೂಪದ ಬಾವುಗಳು ಕೊಲೆಸ್ಟ್ರಾಲ್ ಹೆಚ್ಚಳದ ಆರಂಭಿಕ ಚಿಹ್ನೆಗಳಾಗಿದ್ದು.
ಮನುಷ್ಯರು ಆಧುನಿಕ ಬದುಕಿಗೆ ಒಗ್ಗಿಕೊಂಡಷ್ಟೇ ಸುಲಭವಾಗಿ ಹಲವು ರೋಗಗಳಿಗೂ ಆಹ್ವಾನ ನೀಡುತ್ತಿದ್ದಾರೆ. ಕೆಲಸ, ಜವಾಬ್ದಾರಿಗಳ ನಡುವೆ ಆರೋಗ್ಯದ ಕಡೆ ಕಡೆಗಣನೆ ಶುರುವಾಗಿದೆ. ಮನೆ ಅಥವಾ ಕಚೇರಿಯಿಂದ ಕೆಲಸ ಮಾಡುವುದು, ಶಾಲೆಯಲ್ಲಿ ಓದುವುದು ಅಥವಾ ಆನ್ಲೈನ್ ತರಗತಿಗಳಿಗೆ ಹಾಜರಾಗುವುದು. ಇದು ನಾವು ಜೀವಿಸುತ್ತಿರುವ ಒತ್ತಡದ ಜಗತ್ತು, ಹಣ ಸಂಪಾದಿಸುವ, ಬದುಕಲ್ಲಿ ನೆಮ್ಮದಿಯಾಗಿರುವ ಎಂಬ ಆಲೋಚನೆಯಲ್ಲಿ ಸಾಗುತ್ತಿರುವ ಜನರಿಗೆ ಆರೋಗ್ಯಕರ ಆಹಾರವನ್ನು ತಯಾರು ಮಾಡಲು, ತಿನ್ನಲು ಸಮಯ ಸಿಗುತ್ತಿಲ್ಲ. ಇದರ ಪರಿಣಾಮವಾಗಿ, ಹೆಚ್ಚಿನವರು ಸಕ್ಕರೆ, ಎಣ್ಣೆ, ಸ್ಯಾಚುರೇಟೆಡ್ ಕೊಬ್ಬುಗಳಿರುವ ತಮ್ಮ ಅನುಕೂಲಕ್ಕೆ ತಕ್ಕಂತಹ ಆಹಾರಗಳ ಮೇಲೆ ಅವಲಂಬಿತರಾಗಿದ್ದಾರೆ. ಇದರಿಂದಾಗಿ ಮನುಷ್ಯನ ದೇಹದಲ್ಲಿ ತೂಕವು ಹೆಚ್ಚಳವಾಗುತ್ತಿದೆ. ಇದು ಸ್ಥೂಲಕಾಯಕ್ಕೆ ಕಾರಣವಾಗುತ್ತದೆ ಮತ್ತು ಕೆಲವೊಮ್ಮೆ ಹೃದಯದ ದೀರ್ಘಕಾಲದ ರೋಗಗಳಿಗೂ ಕಾರಣವಾಗುತ್ತದೆ.
ಹೃದಯ ಆರೋಗ್ಯದ ವಿಷಯಕ್ಕೆ ಬಂದರೆ, ಕೊಲೆಸ್ಟ್ರಾಲ್ ಅತ್ಯಂತ ಮುಖ್ಯವಾದ ನಿಯತಾಂಕವಾಗಿದ್ದು ಅದು ಹೃದಯಾಘಾತ ಮತ್ತು ಪಾಶ್ರ್ವವಾಯುವಿನ ಅಪಾಯವನ್ನು ವಿವರಿಸುತ್ತದೆ. ಹೌದು ಕೊಲೆಸ್ಟ್ರಾಲ್ ಹೃದಯ ಸಂಬಂಧಿ ರೋಗಕ್ಕೆ ಮುನ್ಸೂಚನೆ. ರಕ್ತವೂ ನಮ್ಮ ದೇಹದ ಸುತ್ತಲೂ ಸಂಚರಿಸಿ ಸರಿಯಾದ ರಕ್ತ ಪರಿಚಲನೆ ಮೂಲಕ ಅಪಧಮನಿಗಳನ್ನು ಆರೋಗ್ಯವಾಗಿರಿಸುತ್ತದೆ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದಾಗ ತೊಂದರೆ ಉಂಟಾಗುತ್ತದೆ. ಇದು ಅಪಧಮನಿಗಳ ಕಿರಿದಾಗುವಿಕೆಗೆ ಕಾರಣವಾಗುತ್ತದೆ, ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಸರಿಯಾದ ರಕ್ತಪರಿಚಲನೆಗೆ ಅಡ್ಡಿಯಾಗುತ್ತದೆ.
ಅಧಿಕ ಕೊಲೆಸ್ಟ್ರಾಲ್ನ ಲಕ್ಷಣಗಳು ಯಾವುವು?
ಅಧಿಕ ಕೊಲೆಸ್ಟ್ರಾಲ್ ಗಂಭೀರ ಅನಾರೋಗ್ಯದ ಲಕ್ಷಣ. ಇದಕ್ಕೆ ಸಾಮಾನ್ಯವಾಗಿ ಯಾವುದೇ ಪ್ರಮುಖ ಲಕ್ಷಣಗಳು ಇರುವುದಿಲ್ಲ. ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ರೋಗಿಯು ಆರೋಗ್ಯ ಹದಗೆಡಬಹುದು ಎಂದು ತಿಳಿದಿರುವುದಿಲ್ಲ. ಆದಾಗ್ಯೂ, ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಅಸೋಸಿಯೇಶನ್, ನಿಮ್ಮ ಚರ್ಮವು ಅಧಿಕ ಕೊಲೆಸ್ಟ್ರಾಲ್ ಮಟ್ಟಗಳ ಬಗ್ಗೆ ಗಂಭೀರವಾದ ಸುಳಿವುಗಳನ್ನು ನೀಡುತ್ತದೆ ಎಂದು ಹೇಳಿದೆ.
ಕೈ, ಮೊಣಕೈ ಮತ್ತು ಪಾದಗಳ ಮೇಲೆ ಕಾಣುತ್ತವೆ ಅಧಿಕ ಕೊಲೆಸ್ಟ್ರಾಲ್ ಚಿಹ್ನೆಗಳು
ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಸಕಾಲದಲ್ಲಿ ನಿರ್ವಹಿಸದಿದ್ದರೆ, ಅಪಧಮನಿಗಳಲ್ಲಿ ಅಡಚಣೆ ಉಂಟಾಗಬಹುದು, ಇದರಿಂದಾಗಿ ಹೃದಯಾಘಾತ ಅಥವಾ ಪಾಶ್ರ್ವವಾಯು ಉಂಟಾಗುತ್ತದೆ. ಮೊಣಕೈಗಳು, ಮೊಣಕಾಲುಗಳು, ಕೈಗಳು, ಪಾದಗಳು ಅಥವಾ ಕೆಲವೊಮ್ಮೆ ಮೂಗಿನ ಸುತ್ತಲೂ ಸಣ್ಣ, ಮೃದುವಾದ, ಹಳದಿ ಅಥವಾ ಕೆಂಪು ಬಣ್ಣದ ಗಂಟಿನ ರೂಪದ ಬಾವುಗಳು ಕೊಲೆಸ್ಟ್ರಾಲ್ ಹೆಚ್ಚಳದ ಆರಂಭಿಕ ಚಿಹ್ನೆಗಳಾಗಿದ್ದು, ಇವು ನಿಮ್ಮ ಚರ್ಮದ ಮೇಲೂ ಕಾಣಿಸಿಕೊಳ್ಳುತ್ತವೆ ಎಂದು ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಅಸೋಸಿಯೇಷನ್ ತಿಳಿಸುತ್ತದೆ.
ಕೆಲವರು ಅವುಗಳನ್ನು ಸಾಮಾನ್ಯ ಮೊಡವೆ ಎಂದು ಪರಿಗಣಿಸಿ ಸುಮ್ಮನಾಗಿ ಬಿಡುತ್ತಾರೆ. ಇವುಗಳು ವಾಸ್ತವವಾಗಿ ಕೊಲೆಸ್ಟ್ರಾಲ್ ನಿಕ್ಷೇಪಗಳು ಅಥವಾ ಪ್ಯಾಂಕ್ರಿಯಾಟೈಟಿಸ್ನ ಚಿಹ್ನೆಯಾಗಿರುತ್ತದೆ. ಇವುಗಳಲ್ಲಿ ಕೆಲವು ತುಂಬಾ ದೊಡ್ಡದಾಗಿರಬಹುದು - ಸರಿಸುಮಾರು ಮೂರು ಇಂಚು ವ್ಯಾಸ ಮತ್ತು ಕೆಲವು ಚಿಕ್ಕದಾಗಿರಬಹುದು. ಕಾಲಾನಂತರದಲ್ಲಿ, ಇವುಗಳು ಒಟ್ಟಾಗಿ ದೊಡ್ಡ ಕೊಲೆಸ್ಟ್ರಾಲ್ ಉಂಡೆಗಳಾಗಿ ರೂಪುಗೊಳ್ಳಬಹುದು. ಸಾಮಾನ್ಯವಾಗಿ ನೋವುರಹಿತವಾಗಿ, ಇವುಗಳು ದೇಹದ ಯಾವುದೇ ಭಾಗದಲ್ಲಿ ಬೆಳೆಯುವ ಸಾಧ್ಯತೆ ಇರುತ್ತದೆ.
ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟದ ಅಪಾಯವನ್ನು ತಪ್ಪಿಸಬಹುದೇ?
ತಕ್ಷಣವೇ ಅಧಿಕ ಕೊಲೆಸ್ಟ್ರಾಲ್ ಅಪಾಯವನ್ನು ತಗ್ಗಿಸುವುದು ಕಷ್ಟಸಾಧ್ಯ. ಆದರೆ ಇದಕ್ಕೆ ಸಣ್ಣ ಜೀವನಶೈಲಿಯ ಬದಲಾವಣೆಗಳು ಬೇಕಾಗುತ್ತವೆ.
• ಆರೋಗ್ಯಕರ ಕೊಬ್ಬಿನ ಆಹಾರವನ್ನು ಸೇವಿಸಿ - ಕೊಬ್ಬಿನ ಮೀನುಗಳಾದ ಸಾರ್ಡೀನ್ಗಳು, ಬೀಜಗಳು, ದೇಸಿ ತುಪ್ಪ, ಕೊಬ್ಬರಿ ಎಣ್ಣೆಯಲ್ಲಿ ಅಥವಾ ಸಾರ್ಸನ್ ಕಾ ಟೆಲ್ ಅಡುಗೆ ಮಾಡುವುದು
• ಸ್ಯಾಚುರೇಟೆಡ್ ಕೊಬ್ಬುಗಳಿಂದ ತುಂಬಿದ ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ
• ಸಕ್ಕರೆಯಿಂದ ದೂರವಿರಿ
• ನಿಯಮಿತವಾಗಿ ವ್ಯಾಯಾಮ ಮಾಡಿ
• ಪ್ರೋಟೀನ್ ಭರಿತ ಆಹಾರಗಳನ್ನು ಸೇವನೆ ಮಾಡಿ
• ಹಸಿರು ಚಹಾ ಕುಡಿಯಿರಿ
• ನಾರಿನಾಂಶವಿರುವ ಆಹಾರ ಸೇವಿಸಿ


Share this Story:

Follow Webdunia kannada

ಮುಂದಿನ ಸುದ್ದಿ

ಬಾಳೆಹಣ್ಣಿನ ಸಿಪ್ಪೆಯಲ್ಲಿ ಅಡಗಿದೆ ಹೊಳೆಯುವ ಚರ್ಮದ ರಹಸ್ಯ, ಅದನ್ನು ಈ ರೀತಿ ಬಳಸಿ