Effects of Drinking Raw Milk : ಹಾಲು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅನೇಕ ಜನರು ಬೆಳಗ್ಗೆ ಮತ್ತು ರಾತ್ರಿ ಹಾಲು ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ.
ಪ್ರೋಟೀನ್ ಹಾಗೂ ಕ್ಯಾಲ್ಸಿಯಂಗಳ ಆಗರವಾಗಿರುವ ಹಾಲು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಕೆಲವರು ಮನೆಗೆ ತಂದ ಪ್ಯಾಕೆಟ್ ಹಾಲನ್ನು ಬಿಸಿ ಮಾಡದೇ ಹಾಗೆಯೇ ಕುಡಿಯುತ್ತಾರೆ. ಹೀಗೆ ಮಾಡಬಾರದು, ಇದು ಆರೋಗ್ಯಕ್ಕೆ ಬಹಳ ಹಾನಿಕರ ಎಂಬುದು ಹೊಸ ಸಂಶೋಧನೆಯಿಂದ ಬಹಿರಂಗಗೊಂಡಿದೆ.
ಹಾಲು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅನೇಕ ಜನರು ಬೆಳಗ್ಗೆ ಮತ್ತು ರಾತ್ರಿ ಹಾಲು ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಪ್ರೋಟೀನ್ ಹಾಗೂ ಕ್ಯಾಲ್ಸಿಯಂಗಳ ಆಗರವಾಗಿರುವ ಹಾಲು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಕೆಲವರು ಮನೆಗೆ ತಂದ ಪ್ಯಾಕೆಟ್ ಹಾಲನ್ನು ಬಿಸಿ ಮಾಡದೇ ಹಾಗೆಯೇ ಕುಡಿಯುತ್ತಾರೆ. ಹೀಗೆ ಮಾಡಬಾರದು, ಇದು ಆರೋಗ್ಯಕ್ಕೆ ಬಹಳ ಹಾನಿಕರ ಎಂಬುದು ಹೊಸ ಸಂಶೋಧನೆಯಿಂದ ಬಹಿರಂಗಗೊಂಡಿದೆ.
ಹಾಲಿನಲ್ಲಿ ಅನೇಕ ಪೋಷಕಾಂಶಗಳು ಹಾಗೂ ಕಿಣ್ವಗಳು ಇದ್ದು, ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದರೆ ಹಸಿ ಹಾಲಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುತ್ತವೆ. ಹೀಗಾಗಿ ಹಾಲನ್ನು ಕುದಿಸದೆ ಕುಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
ಹಸಿ ಹಾಲು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕಚ್ಚಾ ಹಾಲಿನಲ್ಲಿ ವಿವಿಧ ಬ್ಯಾಕ್ಟೀರಿಯಾಗಳಿರುವುದರಿಂದ ಈ ಹಾಲನ್ನು ಕುಡಿಯುವುದರಿಂದ ಸಂಧಿವಾತ, ಅತಿಸಾರ ಮತ್ತು ನಿರ್ಜಲೀಕರಣದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಕೆಲವರಿಗೆ ಹಸಿ ಹಾಲು ಕುಡಿದರೆ ಅಲರ್ಜಿ ಉಂಟಾಗುತ್ತದೆ. ಹಸಿ ಹಾಲು ಸೇವನೆಯಿಂದ ವಾಕರಿಕೆ, ವಾಂತಿ-ಭೇದಿ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೀಗಾಗಿ ಹಸಿ ಹಾಲು ಕುಡಿಯುವ ಮುನ್ನ ಎಚ್ಚರ ವಹಿಸಿ.
ಹಸಿ ಹಾಲು ಗಾಳಿಯ ಸಂಪರ್ಕಕ್ಕೆ ಬಂದ ತಕ್ಷಣ ಅದರಲ್ಲಿರುವ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಹೀಗಾಗಿಯೇ ಕಚ್ಚಾ ಹಾಲು ಬೇಗನೇ ಹಾಳಾಗುತ್ತದೆ. ಹಸಿ ಹಾಲಿನಲ್ಲಿರುವ ಬ್ಯಾಕ್ಟೀರಿಯಾಗಳು ನಮ್ಮ ದೇಹ ಸೇರಿದಾಗ ಅನೇಕ ಅನಾರೋಗ್ಯ ಸಮಸ್ಯೆಗಳು ಎದುರಾಗಬಹುದು.
ಬಿಸಿ ಮಾಡದೇ ಹಸಿ ಹಾಲು ಕುಡಿಯುವುದರಿಂದ ಕ್ಷಯ(ಟಿಬಿ ಕಾಯಿಲೆ) ಎಂಬ ಅಪಾಯಕಾರಿ ರೋಗಕ್ಕೆ ಕಾರಣವಾಗಬಹುದು. ಬ್ಯಾಕ್ಟೀರಿಯಾಗಳು ಶ್ವಾಸಕೋಸದ ಮೇಲೆ ಪರಿಣಾಮ ಬೀರುತ್ತವೆ.