Select Your Language

Notifications

webdunia
webdunia
webdunia
webdunia

18,870 ಹೊಸ ಕರೊನಾ ಪ್ರಕರಣಗಳು; ಏರಿದ ಸಾವಿನ ಸಂಖ್ಯೆ

18,870 ಹೊಸ ಕರೊನಾ ಪ್ರಕರಣಗಳು; ಏರಿದ ಸಾವಿನ ಸಂಖ್ಯೆ
ನವದೆಹಲಿ , ಬುಧವಾರ, 29 ಸೆಪ್ಟಂಬರ್ 2021 (14:42 IST)
ನವದೆಹಲಿ : ಸತತ ಎರಡನೇ ದಿನ ಭಾರತದಲ್ಲಿ ಕರೊನಾ ನಿತ್ಯ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಇಂದು ಬೆಳಿಗ್ಗೆ 8 ಗಂಟೆಯ ಕೇಂದ್ರ ಆರೋಗ್ಯ ಸಚಿವಾಲಯದ ವರದಿಯಂತೆ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ18,870 ಹೊಸ ಕರೊನಾ ಪ್ರಕರಣಗಳು ವರದಿಯಾಗಿವೆ. ನಿನ್ನೆಯ ದಿನ 18,795 ಪ್ರಕರಣಗಳು ವರದಿಯಾಗಿದ್ದವು.

ಮತ್ತೊಂದೆಡೆ, ಕರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, 378 ಜನರು ಕರೊನಾಗೆ ಬಲಿಯಾಗಿದ್ದಾರೆ. ಅದೇ ನಿನ್ನೆಯ ವರದಿಯಲ್ಲಿ 179 ಕರೊನಾ ಸಾವುಗಳು ವರದಿಯಾಗಿದ್ದವು.
ದೇಶದಲ್ಲಿ ಒಟ್ಟು 2,82,520 ಸಕ್ರಿಯ ಪ್ರಕರಣಗಳಿವೆ ಹಾಗೂ ಕರ್ನಾಟಕದಲ್ಲಿ 12,663 ಸಕ್ರಿಯ ಪ್ರಕರಣಗಳಿವೆ. ಕೇರಳದಲ್ಲಿ 1,49,931 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 11,196 ಹೊಸ ಪ್ರಕರಣಗಳು ವರದಿಯಾಗಿದ್ದು, 149 ಕರೊನಾ ಸಾವುಗಳು ಸಂಭವಿಸಿವೆ. (ಏಜೆನ್ಸೀಸ್)

 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಸ್ಫೋಟ : ಹಾಸ್ಟೆಲ್ನ 54 ವಿದ್ಯಾರ್ಥಿಗಳಿಗೆ ಪಾಸಿಟಿವ್..!