Publish Date: Tue, 28 Sep 2021 (19:09 IST)
Updated Date: Tue, 28 Sep 2021 (19:11 IST)
ರಾಜ್ಯದಲ್ಲಿ ಇಂದು ಹೊಸದಾಗಿ 629 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,74,528 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇಂದು 17 ಜನ ಮೃತಪಟ್ಟಿದ್ದು, ಇದುವರೆಗೆ 37,763 ಜನ ಸಾವನ್ನಪ್ಪಿದ್ದಾರೆ.
ಇವತ್ತು 782 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,24,102 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 12,634 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 0.67 ರಷ್ಟು ಇದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 229 ಜನರಿಗೆ ಸೋಂಕು ತಗುಲಿದ್ದು, 199 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 6 ಜನ ಸಾವನ್ನಪ್ಪಿದ್ದಾರೆ. 7418 ಸಕ್ರಿಯ ಪ್ರಕರಣಗಳು ಇವೆ.