Select Your Language

Notifications

webdunia
webdunia
webdunia
webdunia

ಭಾರತದ ಕೊರೋನಾ ಸಾವು 4 ಲಕ್ಷ ಅಲ್ಲ, 30 ಲಕ್ಷ: ಅಧ್ಯಯನ ವರದಿ!

ಭಾರತದ ಕೊರೋನಾ ಸಾವು 4 ಲಕ್ಷ ಅಲ್ಲ, 30 ಲಕ್ಷ: ಅಧ್ಯಯನ ವರದಿ!
ನವದೆಹಲಿ , ಗುರುವಾರ, 22 ಜುಲೈ 2021 (09:09 IST)
ನವದೆಹಲಿ(ಜು.22): ಭಾರತದಲ್ಲಿ ಕೊರೋನಾದಿಂದ ಮೃತಪಟ್ಟವರು 4 ಲಕ್ಷ ಅಲ್ಲ, ಸುಮಾರು 30 ಲಕ್ಷ ಇರಬಹುದು ಎಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ಹೇಳಿದೆ. ‘ಸರ್ಕಾರವು ಮೃತರ ಅಂಕಿ-ಅಂಶಗಳನ್ನು ಸೂಕ್ತ ರೀತಿಯಲ್ಲಿ ಸಿದ್ಧಪಡಿಸಿದೆ’ ಎಂದು ಭಾರತ ಸರ್ಕಾರ ಇತ್ತೀಚೆಗೆ ಸ್ಪಷ್ಟನೆ ನೀಡಿರುವ ನಡುವೆಯೇ ಈ ಅಧ್ಯಯನವು ಬೇರೆ ಕತೆಯನ್ನೇ ಹೇಳುತ್ತದೆ.



* ಕೊರೋನಾ ಸಾವು 4 ಲಕ್ಷ ಅಲ್ಲ, 30 ಲಕ್ಷ: ಅಮೆರಿಕದ ಅಧ್ಯಯನದ ವಿಶ್ಲೇಷಣೆ
* ಮೋದಿ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರ ಕೂಡ ಅಧ್ಯಯನದಲ್ಲಿ ಭಾಗಿ
* 2020ರ ಜನವರಿಯಿಂದ 20201ರ ಜೂನ್ವರೆಗೆ ಅಂದಾಜಿಗಿಂತ 47 ಲಕ್ಷ ಹೆಚ್ಚು ಸಾವು
* ಇವುಗಳಲ್ಲಿ ಕೋವಿಡ್ ಸಾವಿನ ಪಾಲು ಸುಮಾರು 30 ಲಕ್ಷ

ವಾಷಿಂಗ್ಟನ್ ಮೂಲದ ಸೆಂಟರ್ ಫಾ ಗ್ಲೋಬಲ್ ಡೆವಲಪ್ಮೆಂಟ್ ಎಂಬ ಸಂಸ್ಥೆ ಈ ಅಧ್ಯಯನ ನಡೆಸಿದೆ. 2020ರ ಜನವರಿಯಿಂದ 2021ರ ಜೂನ್ವರೆಗೆ ಸಂಭವಿಸಿದ ಸಾವುಗಳನ್ನು ಸರ್ಕಾರದ ದತ್ತಾಂಶ, ಅಂತಾರಾಷ್ಟ್ರೀಯ ಅಂದಾಜು, ಸೀರೋ ಸಮೀಕ್ಷೆ ಹಾಗೂ ಮನೆ-ಮನೆ ಸಮೀಕ್ಷೆ ನಡೆಸಿ ಕ್ರೊಡೀಕರಿಸಲಾಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಈ ಅಧ್ಯಯನದಲ್ಲಿ ಮೋದಿ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯಂ ಕೂಡ ಭಾಗಿಯಾಗಿದ್ದು, ‘ಸಾವುಗಳು ಸಾವಿರ ಸಂಖ್ಯೆಯಲ್ಲಿಲ್ಲ. ದಶಲಕ್ಷದ ಸಂಖ್ಯೆಗಳಲ್ಲಿವೆ. ಇದು ಭಾರತದ ಅತಿ ಕೆಟ್ಟಮಾನವ ದುರಂತ’ ಎಂದಿದ್ದಾರೆ.
2020ರ ಜನವರಿಯಿಂದ 2021ರ ಜೂನ್ವರೆಗೆ ಸಂಭವಿಸಬೇಕಿದ್ದ ಅಂದಾಜು ಸಾವಿಗಿಂತ 34 ಲಕ್ಷದಿಂದ 47 ಲಕ್ಷ ಹೆಚ್ಚು ಸಾವು ಭಾರತದಲ್ಲಿ ಸಂಭವಿಸಿವೆ. ಹೀಗಾಗಿ ಹೆಚ್ಚುವರಿ 30 ಲಕ್ಷದಿಂದ 40 ಲಕ್ಷ ಸಾವುಗಳನ್ನು ಕೋವಿಡ್ ಸಾವು ಎಂದು ಹೇಳಬಹುದಾಗಿದೆ ಎಂದು ಮಂಗಳವಾರ ಪ್ರಕಟವಾದ ಅಧ್ಯಯನ ವಿವರಿಸಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ಆರ್ಥಿಕ ಸಹಾಯ ಪಡೆಯುತ್ತಿರುವ ಸಂಸ್ಥೆಯ ನೌಕರನೂ ಸರ್ಕಾರಿ ನೌಕರ?