Select Your Language

Notifications

webdunia
webdunia
webdunia
webdunia

ನಿಂಬೆ ತ್ವಚೆಗೆ ಈ ಐದು ಪ್ರಯೋಜನಗಳನ್ನು ನೀಡುತ್ತವೆ

ನಿಂಬೆ ತ್ವಚೆಗೆ ಈ ಐದು ಪ್ರಯೋಜನಗಳನ್ನು ನೀಡುತ್ತವೆ
ಬೆಂಗಳೂರು , ಗುರುವಾರ, 30 ಸೆಪ್ಟಂಬರ್ 2021 (09:21 IST)
ಮುಖವನ್ನು ಆರೋಗ್ಯಕರವಾಗಿ ಮತ್ತು ಕಲೆರಹಿತವಾಗಿಸಲು ಹಲವು ಮನೆಮದ್ದುಗಳನ್ನು ಬಳಸಲಾಗುತ್ತದೆ. ಈ ವಸ್ತುಗಳಲ್ಲಿ ಇರುವ ಪೌಷ್ಟಿಕಾಂಶವು ಚರ್ಮವನ್ನು ತಲುಪುತ್ತದೆ ಮತ್ತು ಪ್ರಯೋಜನಗಳನ್ನು ನೀಡುತ್ತದೆ.

ತ್ವಚೆಯ ಆರೋಗ್ಯಕ್ಕೆ ಬಳಸುವ ಮನೆಮದ್ದಿನಲ್ಲಿ ನಿಂಬೆ ಕೂಡಾ ಮುಖ್ಯ ಪಾತ್ರ ವಹಿಸುತ್ತದೆ. ನಿಂಬೆ ತ್ವಚೆಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ.
ನಿಂಬೆಹಣ್ಣನ್ನು ಬಳಸುವುದರಿಂದ ಆಗುವ ಪ್ರಯೋಜನಗಳು ಇವು
ನಿಂಬೆ ಅಂದರೆ ಸಿಟ್ರಸ್ ಹಣ್ಣು ಎಂದು ಎಲ್ಲರಿಗೂ ತಿಳಿದಿದೆ. ಇದರಲ್ಲಿ ವಿಟಮಿನ್-ಸಿ ಸಮೃದ್ಧವಾಗಿದೆ. ಹೆಲ್ತ್ಲೈನ್ ಪ್ರಕಾರ, ನಿಂಬೆಯನ್ನು ಬಳಸಿದರೆ ಈ ಎಲ್ಲಾ ಪ್ರಯೋಜನಗಳು ಸಿಗಲಿವೆ.
webdunia

1. ನಿಂಬೆಯಲ್ಲಿರುವ ಆಸಿಡಿಕ್ ಮಟ್ಟದ ಕಾರಣದಿಂದಾಗಿ, ಮೊಡವೆಗಳಿಗೆ ಕಾರಣವಾಗುವ ಇಂಫ್ಲಮೇಶನ್ ಮತ್ತು ಪ್ರಾಕೃತಿಕ ಎಣ್ಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ, ಇದರಲ್ಲಿರುವ AHA ಡೆಡ್ ಸೆಲ್ ಗಳನ್ನು ಒಡೆಯುವ ಕೆಲಸ ಮಾಡುತ್ತದೆ. ಇದರಿಂದ ಬ್ಲಾಕ್ ಹೆಡ್ ಗಳನ್ನು ಕೂಡಾ ತಡೆಯಬಹುದು.
webdunia

2. ನಿಂಬೆಹಣ್ಣು ಇಂಫ್ಲಮೇಟರಿ ಆಕ್ನೆಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಈ ಬ್ಯಾಕ್ಟೀರಿಯಾದ ಹೆಸರು Propionibacterium. ಇದರೊಂದಿಗೆ, ನಿಂಬೆಯಲ್ಲಿರುವ ಶಿಲೀಂಧ್ರ-ವಿರೋಧಿ ಗುಣಗಳು ಚರ್ಮದ ಮೇಲೆ ಬೀಳುವ ದದ್ದುಗಳನ್ನು ತಡೆಯುತ್ತದೆ.
3. ನಿಂಬೆಯನ್ನು ಬಳಸಿ ಚರ್ಮದ ಮೇಲಿನ ಕಲೆಗಳನ್ನು ಕಡಿಮೆ ಮಾಡಬಹುದು. ಅಲ್ಲದೆ, ಮುಖದ ಮೇಲೆ ಬೆಳೆಯುವ ಕೂದಲನ್ನು ಕೂಡಾ ಇದು ಕಡಿಮೆ ಮಾಡುತ್ತದೆ.
4. ಅನೇಕ ಬಾರಿ ನಿಂಬೆಯ ಬಳಕೆಯು ತಲೆಹೊಟ್ಟು ಮತ್ತು ಸೋರಿಯಾಸಿಸ್ ಅನ್ನು ನಿವಾರಿಸುವಲ್ಲಿಯೂ ಸಹಕಾರಿಯಾಗಿದೆ. ಇದರಲ್ಲಿರುವ AHA ಡೆಡ್ ಸೆಲ್ ಗಳನ್ನು ಸ್ವಚ್ಛಗೊಳಿಸುತ್ತದೆ.
5. ನಿಂಬೆಯಲ್ಲಿರುವ ವಿಟಮಿನ್-ಸಿ ಚರ್ಮದಲ್ಲಿ ಕೊಲೆಜನ್ ಮಟ್ಟವನ್ನು ಹೆಚ್ಚಿಸುತ್ತದೆ. ಕೊಲೆಜನ್ ಒಂದು ಪ್ರೋಟೀನ್ ಆಗಿದ್ದು, ವಯಸ್ಸಾಗುತ್ತಿದ್ದಂತೆ, ಇದು ಕಡಿಮೆಯಾಗುತ್ತದೆ.
ನಿಂಬೆಯ ಕೆಲವೊಂದು ಅನಾನುಕೂಲತೆಗಳು
webdunia

-ಚರ್ಮದ ತುರಿಕೆಯ ಸಮಸ್ಯೆ ಕಾಣಿಸಿಕೊಳ್ಳಬಹುದು.
-ನಿಂಬೆಯ ಬಳಕೆಯ ನಂತರ ಸೂರ್ಯನ ಹಾನಿಕಾರಕ ಕಿರಣಗಳ ಅಪಾಯ ಹೆಚ್ಚಾಗುತ್ತದೆ.
-ಲ್ಯುಕೋಡರ್ಮಾ
-ಸನ್ ಬರ್ನ್


Share this Story:

Follow Webdunia kannada

ಮುಂದಿನ ಸುದ್ದಿ

ಮುಖದ ಮೊಡವೆಗಳೆಲ್ಲಾ ಮಾಯವಾಗಿ ಬಿಡುತ್ತವೆ