Select Your Language

Notifications

webdunia
webdunia
webdunia
webdunia

ನಿತ್ಯ ಬಾದಾಮಿ ಸೇವಿಸಿ ಬೊಜ್ಜು ಕರಗಿಸಿ ..!

ನಿತ್ಯ ಬಾದಾಮಿ ಸೇವಿಸಿ ಬೊಜ್ಜು ಕರಗಿಸಿ ..!
ಮೈಸೂರು , ಬುಧವಾರ, 29 ಸೆಪ್ಟಂಬರ್ 2021 (07:06 IST)
ಬಾದಾಮಿ ಪೌಷ್ಟಿಕಾಂಶಗಳ ಖಜಾನೆಯಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ ಮತ್ತು ತೂಕ ಇಳಿಸಲು ಕೂಡ ಸಹಕಾರಿ.

ಬಾದಾಮಿಯಲ್ಲಿ ಪ್ರೊಟೀನ್ ಮತ್ತು ಫೈಬರ್ ಹೇರಳವಾಗಿರುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲ ದೇಹದ ತೂಕ ಇಳಿಸಲು  ಕೂಡ ಸಹಾಯ ಮಾಡುತ್ತದೆ ಎನ್ನುತ್ತಾರೆ ದೆಹಲಿಯ ಮ್ಯಾಕ್ಸ್ ಹೆಲ್ತ್ಕೇರ್ನ ಸ್ಥಳೀಯ ಮುಖ್ಯರಸ್ಥರಾಗಿರುವ ಡಯೆಟಿಕ್ಸ್ ರಿತಿಕಾ ಸಮದ್ದರ್. ಅಂತರರಾಷ್ಟ್ರೀಯ ಜರ್ನಲ್ ಆಫ್ ಒಬೆಸಿಟಿಯಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಬಾದಾಮಿ ಸಹಿತ ಆಹಾರವು ಒಟ್ಟು ಶೇಕಡಾ 39 ರಷ್ಟು ಕೊಬ್ಬನ್ನು ಹೊಂದಿದ್ದು, ಅದರಲ್ಲಿ ಶೇಕಡಾ 25 ರಷ್ಟು ಹೃದಯಕ್ಕೆ ಆರೋಗ್ಯಕರವಾದ ಮೋನೋ ಸ್ಯಾಚುರೇಟೆಡ್ ಕೊಬ್ಬುಗಳಿವೆ. ಆದರೆ, ಬಾದಾಮಿ ರಹಿತ ಆಹಾರದಲ್ಲಿ ಶೇಕಡಾ 18 ರಷ್ಟು ಕೊಬ್ಬು ಇದ್ದು, ಶೇಕಡಾ 5 ರಷ್ಟು ಮೋನೋ ಸ್ಯಾಚುರೇಟೆಡ್ ಕೊಬ್ಬು ಇದೆಯಂತೆ.
webdunia

ಅಧ್ಯಯನ ಒಂದರ ಪ್ರಕಾರ, ನಿತ್ಯವೂ ಬಾದಾಮಿ ತಿನ್ನುವುದರಿಂದ ದೇಹದ ತೂಕ ಇಳಿಯುತ್ತದೆ. ಜೊತೆಗೆ ಹೊಟ್ಟೆಯ ಕೊಬ್ಬು ಹಾಗೂ ಸೊಂಟದ ಸುತ್ತಳತೆಯು ಕೂಡ ಕಡಿಮೆ ಮಾಡುತ್ತದೆ. ಅಂದರೆ ಸೊಂಟದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನೂ ಕರಗಿಸುತ್ತದೆ. ಅದರ ಹೊರತಾಗಿ, ಬಾದಾಮಿಯು ನಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ.
ಬಾದಾಮಿಯನ್ನು ಸೇವಿಸಲು ಸೂಕ್ತ ಸಮಯ ಯಾವುದು?
webdunia

ಊಟಕ್ಕೆ ಮುಂಚೆ ಅಥವಾ ನಂತರದ ಸಮಯದಲ್ಲಿ ಕುಕೀಸ್ ಅಥವಾ ಕುರುಕಲು ತಿಂಡಿ ತಿನ್ನಬೇಕೆಂಬ ಆಸೆ ಆಗಬಹುದು. ಅದನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಬಾದಾಮಿಯನ್ನು ತಿನ್ನುವುದು ಉತ್ತಮ ಉಪಾಯ. ಬೆಳಗ್ಗಿನ ಉಪಹಾರ ಮಧ್ಯಾಹ್ನದ ಊಟದ ಮಧ್ಯೆ ಅಥವಾ ಮಧ್ಯಾಹ್ನದ ಊಟ ಮತ್ತು ಸಂಜೆಯ ಉಪಹಾರದ ನಡುವೆ ಹಸಿವಾದಾಗ ಒಂದಿಷ್ಟು ಬಾದಾಮಿ ಸೇವಿಸಿ. ಹಸಿವು ನಿವಾರಣೆಯಾಗುವುದರ ಜೊತೆಗೆ ದೇಹಕ್ಕೆ ಪೌಷ್ಟಿಕಾಂಶವು ಕೂಡ ಸಿಕ್ಕಂತಾಗುತ್ತದೆ.
ಬಾದಾಮಿಯನ್ನು  ಆಹಾರಕ್ರಮದಲ್ಲಿ ಬಳಸುವುದು ಹೇಗೆ?
webdunia

ಹಸಿಯಾಗಿ ತಿನ್ನಿ: ಬಾದಾಮಿಗಳನ್ನು ಸೇವಿಸುವ ಅತ್ಯಂತ ಸರಳ ಮತ್ತು ಪರಿಣಾಮಕಾರಿ ವಿಧಾನವೆಂದರೆ ಅವುಗಳನ್ನು ಹಸಿಯಾಗಿ ಅಥವಾ ಹುರಿದು ತಿನ್ನುವುದು. ಅವುಗಳನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ,ಪೌಷ್ಟಿಕಾಂಶಗಳನ್ನು  ಸುಲಭವಾಗಿ ಹೀರಿಕೊಳ್ಳಲು ಸಹಾಯ ಆಗುತ್ತದೆ. ಬಾದಾಮಿಯ ಸಿಪ್ಪೆ ತೆಗೆದು ತಿನ್ನುವುದರಿಂದ ಬಹಳಷ್ಟು ಫೈಬರ್ ಅಂಶ ನಷ್ಟವಾಗುತ್ತದೆ ಎನ್ನುತ್ತಾರೆ ಸಮದ್ದರ್.
ಅವುಗಳನ್ನು  ಪುಡಿ ಮಾಡಿ ನಿಮ್ಮ ಗಂಜಿಗೆ ಸೇರಿಸಿ: ನಿತ್ಯವೂ ಬಾದಾಮಿ ಸೇವಿಸುವ ಇನ್ನೊಂದು ವಿಧಾನವೆಂದರೆ ಅವುಗಳನ್ನು ಪುಡಿ ಮಾಡಿಟ್ಟುಕೊಂಡು ಬಳಸುವುದು. ನೀವು ಅದನ್ನು ಗಂಜಿ ಅಥವಾ ಯಾವುದೇ ಸಿಹಿ ತಿಂಡಿಗೆ ಹಾಕಿಕೊಂಡು ಸೇವಿಸಬಹುದು.
ಸ್ಮೂದಿ ಅಥವಾ ಶೇಖ್ಗೆ ಹಾಕಿ ಸೇವಿಸಿ: ಫಿಟ್ನೆಸ್ ಬಗ್ಗೆ ಕಾಳಜಿ ಇರುವ ವ್ಯಕ್ತಿಗಳು ಅಥವಾ ನಿತ್ಯವೂ ವ್ಯಾಯಾಮ ಮಾಡುವವವರು ಅಥವಾ ಜಿಮ್ಗೆ ಹೋಗುವವರು ಬಾದಾಮಿ ಸ್ಮೂದಿಯನ್ನು ಸೇವಿಸಬಹುದು. ನಿಮ್ಮ ಹಣ್ಣಿನ  ಸ್ಮೂದಿಗೆ ಎರಡು ಟೇಬಲ್ ಚಮಚದಷ್ಟು ಬಾದಾಮಿ ಪುಡಿ ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಪ್ರೋಟೀನ್, ಸೂಕ್ಷ್ಮ ಪೋಷಕಾಂಶಗಳು ಮತ್ತು ಫೈಬರ್ ಸಿಗುತ್ತದೆ.
ಬಾದಾಮಿ  ಹಾಲು: ಲ್ಯಾಕ್ಟೋಸ್ ಇಂಟೋಲರೆನ್ಸ್ ಇರುವವರು ಬಾದಾಮಿ ಹಾಲನ್ನು ಸೇವಿಸಬಹುದು. ಅದನ್ನು ಮಾಡುವುದು ಕೂಡ ಸುಲಭ. ಬಾದಾಮಿಗಳನ್ನು ನೆನೆ ಇಡಿ, ಬಳಿಕ ಅವುಗಳನ್ನು ರುಬ್ಬಿ ಹಾಲು ತೆಗೆಯಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಬಾಳೆಹಣ್ಣಿನ ಸಿಪ್ಪೆಯಲ್ಲಿ ಅಡಗಿದೆ ಹೊಳೆಯುವ ಚರ್ಮದ ರಹಸ್ಯ, ಅದನ್ನು ಈ ರೀತಿ ಬಳಸಿ