ಸೌತೆಕಾಯಿ ತಿನ್ನುವುದು ಮಾತ್ರವಲ್ಲದೆ, ಸೌತೆಕಾಯಿಯ ನೀರು ಕೂಡ ನಿಮಗೆ ಹಲವು ರೀತಿಯ ಆರೋಗ್ಯಕರ ಲಾಭಗಳನ್ನು ನೀಡುತ್ತದೆ. ಸ್ಥೂಲಕಾಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಸೌತೆಕಾಯಿಯ ನೀರನ್ನು ಪ್ರತಿದಿನ ಕುಡಿಯಿರಿ.
ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಹೆಚ್ಚಿನ ಜನರು ಬೊಜ್ಜು ಸಮಸ್ಯೆಗೆ ಗುರಿಯಾಗುತ್ತಾರೆ. ಇದೇ ವೇಳೆ, ದೇಹದಲ್ಲಿ ಕೊಬ್ಬಿನ ಹೆಚ್ಚಳವು ನಿಮ್ಮ ದೇಹದ ಆಕಾರವನ್ನು ಹಾಳುಮಾಡುವುದಲ್ಲದೆ, ಅನೇಕ ರೋಗಗಳನ್ನು ಉಂಟುಮಾಡುತ್ತದೆ.
ಬೊಜ್ಜು ಕಡಿಮೆ ಮಾಡಲು ಜನರು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ವ್ಯಾಯಾಮದಿಂದ ಹಿಡಿದು ವಿಶೇಷ ಆಹಾರವನ್ನು ಅನುಸರಿಸುವವರೆಗೆ, ಬೊಜ್ಜು ಕಡಿಮೆ ಮಾಡಲು ಹಲವು ಮಾರ್ಗಗಳಿವೆ, ಆದರೆ ಸೌತೆಕಾಯಿ ನೀರು ನೈಸರ್ಗಿಕ ಪರಿಹಾರವಾಗಿದ್ದು, ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೊಜ್ಜು ಕಡಿಮೆಯಾಗುತ್ತದೆ
ಸೌತೆಕಾಯಿ ನೀರು ಹೆಚ್ಚುವರಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಇರುತ್ತದೆ. ಇದು ಅನೇಕ ಪೋಷಕಾಂಶಗಳನ್ನು ಸಹ ಹೊಂದಿದೆ, ಅವು ನಿಮಗೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ಸೌತೆಕಾಯಿಯಲ್ಲಿ ಪೊಟ್ಯಾಶಿಯಂ, ಮೆಗ್ನೀಶಿಯಂ, ವಿಟಮಿನ್ ಸಿ, ಸತು, ಫ್ಲೇವನಾಯ್ಡ್ಗಳು, ಉತ್ಕರ್ಷಣ ನಿರೋಧಕಗಳು ಮತ್ತು ರಂಜಕಗಳಿವೆ, ಇವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಶರೀರವನ್ನು ಹೈಡ್ರೇಟ್ ಆಗಿಡುತ್ತದೆ
ಸೌತೆಕಾಯಿಯಲ್ಲಿರುವ ಕರಗುವ ನಾರು ನಿಮಗೆ ಪ್ರಯೋಜನಗಳನ್ನು ನೀಡಲಿದೆ. ನೀವು ಪ್ರತಿದಿನ ಸೌತೆಕಾಯಿಯ ನೀರನ್ನು ಕುಡಿದರೆ, ಅದು ಯಕೃತ್ತನ್ನು ಬಲಪಡಿಸುತ್ತದೆ ಮತ್ತು ಮಲಬದ್ಧತೆಯನ್ನು ದೂರವಿದುವಿಡುತ್ತದೆ. ಸೌತೆಕಾಯಿ ನೀರು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸುತ್ತದೆ. ಕೆಲವೊಮ್ಮೆ, ಹೊಟ್ಟೆಯಲ್ಲಿ ಅತಿಯಾದ ಶಾಖದಿಂದಾಗಿ, ಕೆಟ್ಟ ವಾಸನೆ ಬರಲು ಆರಂಭವಾಗುತ್ತದೆ. ಸೌತೆಕಾಯಿ ನೀರು ಹೈಡ್ರೇಟಿಂಗ್ ಗುಣಗಳನ್ನು ಹೊಂದಿದೆ. ಇದು ಹೊಟ್ಟೆಯಿಂದ ಹೆಚ್ಚುವರಿ ಶಾಖವನ್ನು ಕಡಿಮೆ ಮಾಡುತ್ತದೆ.
ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ
ಸೌತೆಕಾಯಿ ನೀರು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಉತ್ಕರ್ಷಣ ನಿರೋಧಕಗಳು ಇದರಲ್ಲಿ ಕಂಡುಬರುತ್ತವೆ, ಇದು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ 6, ವಿಟಮಿನ್ ಸಿ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಈ ಎಲ್ಲಾ ಪೋಷಕಾಂಶಗಳು ನಿಮ್ಮನ್ನು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿ ಆರೋಗ್ಯವಾಗಿರಿಸುತ್ತದೆ.
ಇಲ್ಲಿದೆ ತಯಾರಿಸುವ ವಿಧಾನ
ಒಂದು ಸೌತೆಕಾಯಿಯನ್ನು ತೆಗೆದುಕೊಂಡು ಅದರ ಅರ್ಧಭಾಗದ ಸಿಪ್ಪೆ ಸುಲಿಯಿರಿ. ಉಳಿದ ಅರ್ಧ ಭಾಗವನ್ನು ಹಾಗೆಯೇ ಬಿಡಿ. ನಂತರ ಸೌತೆಕಾಯಿಯನ್ನು ಹೋಳುಗಳಾಗಿ ಈ ಹೋಳುಗಳನ್ನು ನೀರು ತುಂಬಿದ ಜಗ್ ನಲ್ಲಿ ಹಾಕಿ. ಸವತೆಕಾಯಿಯ ಹೊಳುಗಳಿಗೆ ಅನುಗುಣವಾಗಿ ನೀರಿನ ಪ್ರಮಾಣವನ್ನು ಇರಿಸಿ. ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನಂತರ ನೀರನ್ನು ಬಸಿದು, ಆ ನೀರನ್ನು ನೀವು ಕುಡಿಯಿರಿ.