ಸುಖಿಸುವಾಗ ಬೇಗ ಔಟ್ ಆಗುತ್ತಿರುವೆ…

ಸೋಮವಾರ, 22 ಏಪ್ರಿಲ್ 2019 (14:49 IST)
ಪ್ರಶ್ನೆ: ಸರ್, ನನ್ನ ಹೆಸರು, ಊರು ಬೇಡ. ನನಗೆ ಇನ್ನೂ ಮದುವೆಯಾಗಿಲ್ಲ. ನನ್ನ ಸಮಸ್ಯೆ ಏನೆಂದರೆ ಎರಡು ವರ್ಷಗಳ ಹಿಂದಿನಿಂದ ನಮ್ಮ ಕಾಲೇಜಿನ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿರುವೆ. ನಾನು ಅವಳು ಹಲವು ಬಾರಿ ರೋಮ್ಯಾನ್ಸ್ ಮಾಡಿದ್ದೇವೆ. ಆದರೆ ಅವಳ ಜತೆ ಪೂರ್ಣ ಒಂದಾಗಬೇಕಾದರೆ ನಾನು ಬೇಗನೆ ಔಟ್ ಆಗುತ್ತಿರುವೆ. ಇದರಿಂದ ನನಗೆ ಚಿಂತೆಯಾಗಿದೆ. ಅವಳಿಗೂ ಸರಿಯಾಗಿ ಸುಖ ಸಿಗುತ್ತಿಲ್ಲ. ಇದಕ್ಕೆ ಚಿಕಿತ್ಸೆ ಇದೆಯಾ?

ಉತ್ತರ: ನಿಮ್ಮ ಸಮಸ್ಯೆಯಾಗಿರುವ ಶೀಘ್ರ ಸ್ಖಲನಕ್ಕೆ ಚಿಕಿತ್ಸೆ ಇದೆ. ಅದಕ್ಕೂ ಮಿಗಿಲಾಗಿ ನೀವಾಗಿಯೇ ಸಮರಸದ ವಿಷಯದಲ್ಲಿ ಹಿಡಿತ ಸಾಧಿಸಬಹುದು. ಆರಂಭದಲ್ಲಿ ಈ ರೀತಿ ಸಮಸ್ಯೆಯನ್ನು ಬಹುತೇಕರು ಎದುರಿಸಿರುತ್ತಾರೆ. ಹೀಗಾಗಿ ಭಯ ಬಿಡಿ.

ಆರಂಭದಲ್ಲಿ ಹೀಗೆ ಆದರೂ ಮುಂದೆ ಸರಿಹೋಗುತ್ತದೆ. ಸಮಾಗಮದಲ್ಲಿ ಒಂದಾಗುವ ಸಮಯದಲ್ಲಿ ಪರಾಕಾಷ್ಠೆ ತಲುಪಿದಾಗ ನಿಮ್ಮ ಗಮನವನ್ನು ಒಂದಷ್ಟು ಸಮಯ ಬೇರೆ ವಿಷಯದತ್ತ ತಿರುಗಿಸಿ. ಇಲ್ಲವೇ ಒಂದಷ್ಟು ನಿಮಿಷ ತಟಸ್ಥವಾಗಿದ್ದು ಮತ್ತೆ ಮುಂದುವರಿಯಿರಿ. ಹೀಗೆ ಮಾಡುವುದರಿಂದ ನೀವು ನಿಮ್ಮ ಸಮಸ್ಯೆಯ ಮೇಲೆ ಹಿಡಿತ ಸಾಧಿಸಬಹುದು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮನೆಯಲ್ಲಿಯೇ ನ್ಯಾಚುರಲ್ ಆಗಿ ಕೂದಲನ್ನು ಸ್ಟ್ರೇಟನಿಂಗ್ ಮಾಡಿಸಿಕೊಳ್ಳುವುದು ಹೇಗೆ ಗೊತ್ತಾ?