Select Your Language

Notifications

webdunia
webdunia
webdunia
webdunia

ಗಂಡ ಇಲ್ಲದಾಗ ಪವಿತ್ರಳಿಗೆ ಸುಖ ಕೊಡ್ತಿರೋರು ಯಾರು?

ಗಂಡ ಇಲ್ಲದಾಗ ಪವಿತ್ರಳಿಗೆ ಸುಖ ಕೊಡ್ತಿರೋರು ಯಾರು?
ಬೆಂಗಳೂರು , ಬುಧವಾರ, 17 ಏಪ್ರಿಲ್ 2019 (20:48 IST)
ಪ್ರಶ್ನೆ: ಆಕೆ ನಮ್ಮ ಮನೆ ಎದುರಲ್ಲೇ ವಾಸಮಾಡ್ತಿರೋ ಯುವತಿ. ಮದುವೆಯಾಗಿ ಒಂದೆರಡು ವರ್ಷ ಆಗಿವೆ. ನೋಡೋಕೆ ಪರವಾಗಿಲ್ಲ ಎನ್ನುವಂತಿರುವವಳ ಹೆಸರು ಪವಿತ್ರ ಅಂತ. ಆಕೆಯ ಗಂಡ ನಿತ್ಯ ಕಚೇರಿಗೆ ಹೋಗುತ್ತಾನೆ. ಖಾಸಗಿ ಕಂಪನಿಯಲ್ಲಿ ನೌಕರ ಆಗಿರುವ ಕಾರಣ ಭಾನುವಾರವೂ ಆತನದ್ದು ಬಿಡುವಿಲ್ಲದ ಕೆಲಸ.

ಹೀಗಿರುವಾಗ ಮನೆಯಲ್ಲಿ ಒಬ್ಬಳೇ ಇರುವ ಪವಿತ್ರಳ ಮನೆಗೆ ಆಗಾಗ್ಗೆ ಒಬ್ಬ ಯುವಕ ಬರುತ್ತಿದ್ದನು. ಆತ ಬಂದಾಗ ಬಾಗಿಲು ಮುಚ್ಚಿಕೊಂಡು ಏನೇನೋ ಶಬ್ದಬರದಂತೆ ಎಲ್ಲಾ ಮಾಡಿಮುಗಿಸುತ್ತಿದ್ದಾಳೆ. ಅವರಿಬ್ಬರೂ ಬೆಡ್ ಮೇಲೆ ಒಂದಾಗಿರುವುದನ್ನು ನಾನೊಮ್ಮೆ ಕಿಟಕಿಯಲ್ಲಿ ನೋಡಿದೆ. ಗಂಡನಿಲ್ಲದ ಸಮಯದಲ್ಲಿ ಪವಿತ್ರ ತನ್ನ ಇನಿಯನನ್ನು ಮನೆಗೆ ಕರೆದುಕೊಂಡು ಬಂದು ಸುಖ ಅನುಭವಿಸುತ್ತಿದ್ದಾಳೆ. ಏನೂ ತಿಳಿಯದ ಆಕೆಯ ಗಂಡನಿಗೆ ಈ ವಿಷಯ ಹೇಳಲೇ?

ಉತ್ತರ: ನಮ್ಮ ಸುತ್ತಮುತ್ತ ಇಂತಹ ಹಲವು ಘಟನೆಗಳು, ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇನ್ನೊಬ್ಬರ ಮನೆಯ ಹೆಂಡತಿಯನ್ನು ಅಷ್ಟಾಗಿ ಗಮನಿಸುವುದು ಸರಿಯಲ್ಲ. ನೀವು ಅವಳ ಮೇಲೆ ಮೋಹಗೊಂಡಿದ್ದೀರಾ? ಸ್ಪಷ್ಟವಾಗುತ್ತಿಲ್ಲ. ಅವರ ಜೀವನಕ್ಕೆ ಏನು ಬೇಕೋ ಅದನ್ನು ಪಡೆದುಕೊಳ್ತಿದ್ದಾರೆ. ಅದು ಅವರ ಮನೆ ವಿಷಯ. ಅವರ ಗಂಡ ನಿಮ್ಮ ಸ್ನೇಹಿತನೇ, ನಿಮ್ಮ ಬಂಧುವೇ ಎಂಬುದು ಸ್ಪಷ್ಟಪಡಿಸಿಲ್ಲ.

ಆದರೂ ನೀವು ಒಂದು ವೇಳೆ ಆಕೆಯ ಗಂಡನಿಗೆ ಪವಿತ್ರಳ ಅಪವಿತ್ರ ದಂಧೆಯ ಬಗ್ಗೆ ಹೇಳಿದರೆ ಅವರ ಕುಟುಂಬವೇ ಒಡೆದುಹೋಗುತ್ತದೆ. ಅವರ ಎರಡೂ ಕುಟುಂಬಗಳೂ ಬೇರೆಯಾಗುತ್ತವೆ ಎಂಬುದನ್ನು ನೆನಪಿಡಿ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗೋದಿಲ್ಲ ಎಂದುಕೊಂಡಿರುವಂತೆ, ಪವಿತ್ರಳ ಅಸಲಿ ಬಣ್ಣ ಒಂದಲ್ಲ ಒಂದು ದಿನ ಬಯಲಿಗೆ ಬರುತ್ತದೆ. ಅದನ್ನು ನಿವಾಗಿಯೇ ಹೇಳಿ ನೀವು ಕೆಟ್ಟವರಾಗಿ ಮತ್ತು ವಿಷಮ ಪರಿಸ್ಥಿತಿ ಎದುರಿಸೋದು ತರವಲ್ಲ.



Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿಯಾದ್ರೆ ಸಾಕು, ಸೊಂಟ ನೋವು ಅಂತಾಳೆ