Publish Date: Fri, 12 Apr 2019 (12:51 IST)
Updated Date: Fri, 12 Apr 2019 (12:53 IST)
ಅವಳು ಇಂಜಿನಿಯರಿಂಗ್ ಓದುತ್ತಿದ್ದಳು. ನೂರಾರು ಬಣ್ಣದ ಕನಸುಗಳನ್ನು ಕಂಡಿದ್ದ ಹುಡುಗಿ ತನ್ನದಲ್ಲದ ತಪ್ಪಿಗೆ ನಡುರಸ್ತೆಯಲ್ಲೇ ಬರ್ಬರವಾಗಿ ಸಾವನ್ನಪ್ಪಿದ್ದಾಳೆ.
ಕುರಿ ಕಾಯುವವರ ಹತ್ತಿರ ಇದ್ದ ಕುಡುಗೋಲು ಯುವತಿಯೊಬ್ಬರ ಜೀವ ತೆಗೆದಿದೆ. ಇಂಜಿನಿಯರಿಂಗ್ ಓದುತ್ತಿದ್ದ ಯುವತಿಯ ಕುತ್ತಿಗೆಗೆ ಕುಡುಗೋಲು ತಲುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಲಬುರಗಿಯ ರಾಮಮಂದಿರ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಮೇಘಾ ಸಾವನ್ನಪ್ಪಿದ ಯುವತಿಯಾಗಿದ್ದಾಳೆ.
ಆಕ್ಟಿವಾದಲ್ಲಿ ವೇಗವಾಗಿ ಕಾಲೇಜಿಗೆ ಯುವತಿ ತೆರಳುತ್ತಿದ್ದಳು. ಅದೇ ಮಾರ್ಗದಲ್ಲಿ ಕುರಿಗಾಯಿಯೊಬ್ಬನ ತನ್ನ ಹರಿತವಾದ ಕುಡುಗೋಲನ್ನು ಸೈಕಲ್ ಮೇಲೆ ಇಟ್ಟುಕೊಂಡು ಸೈಕಲ್ ಚಲಾಯಿಸುತ್ತಿದ್ದನು.
ಆಗ ಸೈಕಲ್ ಮೇಲಿದ್ದ ಕುಡುಗೋಲು ನೇರವಾಗಿ ಯುವತಿಯ ರುಂಡ ಕತ್ತರಿಸಿದೆ. ಗಂಭೀರ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ಯುವತಿ ಮಾರ್ಗದ ನಡುವೆಯೇ ಪ್ರಾಣ ಬಿಟ್ಟಿದ್ದಾಳೆ. ಕುರಿಗಾಯಿ ಪರಾರಿಯಾಗಿದ್ದಾನೆ. ಈ ಕುರಿತು ಗುಲ್ಬರ್ಗಾ ವಿಶ್ವವಿದ್ಯಾಲಯ ಠಾಣೆಯಲ್ಲಿ ದೂರು ದಾಖಲಾಗಿದೆ.