Select Your Language

Notifications

webdunia
webdunia
webdunia
webdunia

ಕೆ.ಎಸ್.ಈಶ್ವರಪ್ಪ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ವೆಂಕಟರಾವ್ ನಾಡಗೌಡ

ಕೆ.ಎಸ್.ಈಶ್ವರಪ್ಪ
ಬೆಂಗಳೂರು , ಬುಧವಾರ, 3 ಏಪ್ರಿಲ್ 2019 (14:57 IST)
ಬೆಂಗಳೂರು : ತಮ್ಮ ನಾಯಕನ ಬಗ್ಗೆ ಮಾತನಾಡಿದ್ದಕ್ಕೆ ಶಾಸಕ ಕೆ.ಎಸ್.ಈಶ್ವರಪ್ಪರವರ ವಿರುದ್ಧ ವೆಂಕಟರಾವ್ ನಾಡಗೌಡ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.


ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪನದು ಎಲುಬಿಲ್ಲದ ನಾಲಿಗೆ. ಏನ್ ಮಾತನಾಡ್ತಿದ್ದಾನೆಂದು ಅವನಿಗೆ ಗೊತ್ತಾಗುವುದಿಲ್ಲ . ಈಶ್ವರಪ್ಪ ಮಾತನಾಡ್ತಾನೆಂದು ನಾನು ಮಾತನಾಡುವುದಿಲ್ಲ. ಆತ ಇನ್ನೂ ನೂರುಕಾಲ ಬಾಳಲಿ ಎಂದು ಆಶೀರ್ವದಸ್ತೇನೆ ಎಂದು  ವ್ಯಂಗ್ಯವಾಡಿದ್ದಾರೆ.


ನಮ್ಮ ನಾಯಕ ನೆಗೆದು ಬೀಳಲಿ ಎಂದು ಮಾತನಾಡುತ್ತಾನೆ. ಈಶ್ವರಪ್ಪ ತಾನು ಸಾಯುವುದಿಲ್ಲವೆಂದು ತಿಳಿದ್ಕೊಂಡಿದ್ದಾನೆ. ಆದ್ರೆ ಸಾವು ಯಾರನ್ನೂ ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯರಾತ್ರಿಯ ಮಂಡ್ಯ ಸಭೆ ಮಾಡಿದ್ಯಾಕೆ?