Select Your Language

Notifications

webdunia
webdunia
webdunia
webdunia

ಮಧ್ಯರಾತ್ರಿಯ ಮಂಡ್ಯ ಸಭೆ ಮಾಡಿದ್ಯಾಕೆ?

ಮಧ್ಯರಾತ್ರಿಯ ಮಂಡ್ಯ ಸಭೆ ಮಾಡಿದ್ಯಾಕೆ?
ಮಂಡ್ಯ , ಬುಧವಾರ, 3 ಏಪ್ರಿಲ್ 2019 (14:51 IST)
ಮಂಡ್ಯ ರಣಕಣ ದಿನೇ ದಿನೇ ಹೈವೋಲ್ಟೇಜ್ ಕಣವಾಗ್ತಿದೆ. ಕೈ ನಾಯಕರ ಮಂಡೆಯನ್ನೂ ಬಿಸಿಮಾಡಿರುವ  ಜಿಲ್ಲೆಯ ಪ್ರಮುಖ ನಾಯಕರ ಸಭೆಯನ್ನು ಮಧ್ಯರಾತ್ರಿ ಕರೆಯಲಾಗಿತ್ತು.

ಮಾಜಿ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾನು, ದೇವೇಗೌಡರು ಮಂಡ್ಯಕ್ಕೆ ಪ್ರಚಾರಕ್ಕೆ ಬಂದಾಗ ನೀವೆಲ್ಲಾ ಜೊತೆಗಿರಬೇಕು ಎಂದು ಸಿದ್ದರಾಮಯ್ಯ ತಮ್ಮ ಪಕ್ಷದ ನಾಯಕರಿಗೆ ಹೇಳಿದ್ದಾರೆ.

ಮರ್ಯಾದೆ, ಗೌರವದ ಪ್ರಶ್ನೆ ಇದಾಗಿದೆ. ಅದಕ್ಕಾಗಿಯಾದ್ರೂ ನಿಖಿಲ್ ಗೆ ಸಪೋರ್ಟ್ ಮಾಡಿ. ಮೈತ್ರಿ ಅಭ್ಯರ್ಥಿ ಗೆಲ್ಲಿಸದಿದ್ದರೆ ಬಹಳ ದೊಡ್ಡ ತಪ್ಪು ಸಂದೇಶ ರವಾನೆಯಾಗುತ್ತೆ ಅಂತ ಸಿದ್ದರಾಮಯ್ಯ ಮಂಡ್ಯ ಕಾಂಗ್ರೆಸ್ ಮುಖಂಡರಿಗೆ ಸೂಚನೆ ನೀಡಿದ್ದಾರೆ.
ಮೈಸೂರಲ್ಲಿ ಜೆಡಿಎಸ್ ಸಪೋರ್ಟ್ ಮಾಡ್ತಿಲ್ಲ ಅನ್ನೋ ಕಾರಣಕ್ಕೆ ಎಚ್ಚೆತ್ತುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಮಂಡ್ಯ ಕೈ ಲೀಡರ್ಸ್ ಜೊತೆ ಸಭೆ ಮಾಡಿದ್ದಾರೆ. ದಿನದಿಂದ ದಿನಕ್ಕೆ ಸುಮಲತ ಸ್ಟ್ರಾಂಗ್ ಆಗ್ತಿರೋದು ದೋಸ್ತಿಗಳ ನಿದ್ದೆಗೆಡಿಸಿದೆ.

ಸುಮಲತಾ ಹಿಂದೆ ಕಾಂಗ್ರೆಸ್ ನಿಂತಿದೆ ಅನ್ನೋ ಮಾತಿದೆ. ಹಾಗೆ ಆಗಬಾರದು. ಮೈತ್ರಿ ಧರ್ಮ ಕಾಪಾಡಬೇಕಿದೆ. ಜೆಡಿಎಸ್ ಅಭ್ಯರ್ಥಿ ಬೆಂಬಲಿಸಿ ಎಂದ ಸಿದ್ದು ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ವಿರುದ್ಧ ಕೈ ನಾಯಕರು ಗರಂ!