Select Your Language

Notifications

webdunia
webdunia
webdunia
webdunia

ಕೈ ಟಿಕೆಟ್ ಘೋಷಣೆ; ಹರಿದಾಡಿದ ಪತ್ರ ನಕಲಿ?

ಕೈ ಟಿಕೆಟ್ ಘೋಷಣೆ; ಹರಿದಾಡಿದ ಪತ್ರ ನಕಲಿ?
ಹುಬ್ಬಳ್ಳಿ , ಮಂಗಳವಾರ, 2 ಏಪ್ರಿಲ್ 2019 (17:24 IST)
ಕಗ್ಗಂಟಾಗಿರುವ ಧಾರವಾಡ ಲೋಕಸಭೆ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ.

ಹುಬ್ಬಳ್ಳಿ ಖಾಸಗಿ ಹೋಟೆಲ್ ನಲ್ಲಿ ಮಹತ್ವದ ಸಭೆ ನಡೆದಿದೆ. ಮಾಜಿ ಸಿ ಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ, ಶಾಕೀರ ಸನದಿ, ಡಾ.ಸೀಮಾ ಸಾಧೀಕ್ ಸೇರಿದಂತೆ ಹಲವು ಕೈ ಮುಖಂಡರು ಭಾಗಿಯಾಗಿದ್ದಾರೆ.

ಮಾಜಿ ಸಚಿವ ವಿನಯ್ ಪರವಾಗಿ ಒಲವು ವ್ಯಕ್ತಪಡಿಸಿರುವ ಸಿದ್ದರಾಮಯ್ಯ ನಡೆ ಕುತೂಹಲ ಮೂಡಿಸಿದೆ.
ಕಳೆದ ರಾತ್ರಿ ಶಾಕೀರ ಸನದಿಗೆ ಟಿಕೆಟ್ ಘೋಷಣೆ ಆಗಿದೆ ಎನ್ನುವ ನಕಲಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ  ಹರಿದಾಡಿತ್ತು. ಅದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಮೂರು ಜನ ಟಿಕೆಟ್ ಆಕಾಂಕ್ಷಿಗಳನ್ನ ಜೊತೆಗೆ ಸಭೆ ನಡೆಸಿರುವ ಸಿದ್ದರಾಮಯ್ಯಗೆ ಸಿಎಮ್ ಇಬ್ರಾಹಿಂ ಸಾಥ್ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬರ್ತಾರೆ ಅಂತ ಸಂತ್ರಸ್ಥರ ಮೇಲೆ ಪೊಲೀಸ್ ದರ್ಪ?