Select Your Language

Notifications

webdunia
webdunia
webdunia
webdunia

ಕೈ ಮುಖಂಡರಿಗೆ ಗೆಲುವಿನ ಪಾಠ ಮಾಡಿದ ಸಿದ್ದರಾಮಯ್ಯ

ಕೈ ಮುಖಂಡರಿಗೆ ಗೆಲುವಿನ ಪಾಠ ಮಾಡಿದ ಸಿದ್ದರಾಮಯ್ಯ
ಮೈಸೂರು , ಭಾನುವಾರ, 31 ಮಾರ್ಚ್ 2019 (11:55 IST)
ಎಲೆಕ್ಷನ್ ಕದನ ದಿನದಿನಕ್ಕೆ ಕಾವೇರಿತ್ತಿರುವಂತೆ ಕೈ ಪಾಳೆಯದ ಕಾರ್ಯಕರ್ತರಿಗೆ ಸಮನ್ವಯ ಸಮಿತಿ ಅಧ್ಯಕ್ಷ ಗೆಲುವಿನ ಪಾಠ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಸಭೆ ನಡೆಯಿತು.
ಜೆಡಿಎಸ್ ಸಚಿವ ಸಾ.ರಾ.ಮಹೇಶ್ ಇದ್ದರು.

ಮಂಡ್ಯ, ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಕಾರ್ಯತಂತ್ರ ರೂಪಿಸಲಾಯಿತು. ಸಭೆಯಲ್ಲಿದ್ದವ್ರಿಗೆ ಗೆಲುವಿನ ಮ್ಯಾಥಮೆಟಿಕ್ಸ್ ಬೋಧಿಸಿದರು ಸಿದ್ದರಾಮಯ್ಯ.

ಎರಡು ಪಕ್ಷಗಳು ಒಟ್ಟಾಗಿ ಹೋದ್ರೆ 28 ಕ್ಷೇತ್ರಗಳಲ್ಲಿ  ಗೆಲುವು ಶತಸಿದ್ಧ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಶೇ. 38 ರಷ್ಟು ಮತ ಪಡೆದಿದ್ದವು. ಬಿಜೆಪಿ ಶೇ.37 ರಷ್ಟು ಮತ ಪಡೆದಿತ್ತು. ಜೆಡಿಎಸ್ ಗೆ ಶೇ. 19 ರಷ್ಟು ಮತ ಬಂದಿತ್ತು.
ನಾವು ಇಬ್ಬರೂ ಸೇರಿದರೆ ಶೇ. 57 ರಷ್ಟು ಮತ ಬರಲಿದೆ. ಆದ್ರೆ ಸೀಟು ಗೆದ್ದಿದ್ದು 120, ಆದ್ರೆ ಶೇ. 37 ರಷ್ಟು ಮತ ಪಡೆದಿದ್ದ ಬಿಜೆಪಿಯವರು 104 ಸ್ಥಾನ ಗೆದ್ದರು.

ಈ ಚುನಾವಣೆಯಲ್ಲಿ ಇಬ್ಬರೂ ಒಟ್ಟಾಗಿ ನಮ್ಮ ಮತಗಳನ್ನ ಜೆಡಿಎಸ್ ಗೆ, ಅವರ ಮತಗಳನ್ನು ನಮ್ಮ ಕಾಂಗ್ರೆಸ್ ಗೆ  ಹಾಕಿಸಿದ್ರೆ 28 ಕ್ಷೇತ್ರಗಳಲ್ಲಿ ನಮ್ಮ ಗೆಲುವು ಸುಲಭ ಅಂತ ಕಾರ್ಯಕರ್ತರಿಗೆ ಗೆಲುವಿನ ಪಾಠ ಮಾಡಿದ್ದಾರೆ ಸಿದ್ದರಾಮಯ್ಯ.



Share this Story:

Follow Webdunia kannada

ಮುಂದಿನ ಸುದ್ದಿ

ಈ ಆ್ಯಪ್ ಬಳಸಿ ಬೆಂಗಳೂರಿನಲ್ಲಿ ವಾಹನ ಪಾರ್ಕಿಂಗ್ ಬಗ್ಗೆ ಎಲ್ಲಾ ಮಾಹಿತಿ ತಿಳಿಯಬಹುದಂತೆ