Select Your Language

Notifications

webdunia
webdunia
webdunia
webdunia

ಎಲೆಕ್ಷನ್ ಹೈವೋಲ್ಟೇಜ್ ಇಂಡಿಯಾ ಥರ ಆಗಿದೆಯಂತೆ..!

ಎಲೆಕ್ಷನ್ ಹೈವೋಲ್ಟೇಜ್  ಇಂಡಿಯಾ ಥರ ಆಗಿದೆಯಂತೆ..!
ಬೆಂಗಳೂರು , ಶನಿವಾರ, 30 ಮಾರ್ಚ್ 2019 (14:51 IST)
ಚುನಾವಣೆಯನ್ನು ಯಾರೂ ಪರಸನಲ್ ಆಗಿ ತಗೋಬಾರದು. ಮಂಡ್ಯದಲ್ಲಿ ಪ್ರಚಾರ ಭರಾಟೆ ಜೋರಾಗಿದೆ. ಮಂಡ್ಯ ಅಂದ್ರೆ ಇಂಡಿಯಾ ಥರ ಆಗಿದೆ. ಹೀಗಂತ ಜೆಡಿಎಸ್ ಹಿರಿಯ ಮುಖಂಡ ಹೇಳಿದ್ದಾರೆ.

ಮಂಡ್ಯದಲ್ಲಿ ವಯಕ್ತಿಕ ಟೀಕೆಗಳು ನಡೆಯುತ್ತಿವೆ. ಅದಕ್ಕೆ ಏನು ಮಾಡೋಕೆ ಆಗೊಲ್ಲ. ಪರಸನಲ್ ಆಗಿ ತಗೊಂಡ್ರೆ ಯಾವುದೇ ಪ್ರಯೋಜನ ಇಲ್ಲ. ಸಿಎಂ ಹೆಚ್ಚು ಪರಸನಲ್ ಆಗಿ ತಗೊಂಡಿಲ್ಲ. ಸಿಎಂ ಮಗ ಅನ್ನೋದಕ್ಕೆ ನಿಮಗೆ ಹಾಗೆ ಅನ್ನಿಸುತ್ತಿದೆ ಅಷ್ಟೆ ಅಂತ ಜೆಡಿಎಸ್ ನ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

ಇನ್ನು ಮೈಸೂರು ಕ್ಷೇತ್ರದಲ್ಲಿ ಎಲ್ಲಾ ರೀತಿಯಲ್ಲಿ ಸರಿ ಹೋಗುತ್ತೆ. ಇನ್ನೆರಡು ದಿನಗಳಲ್ಲಿ ಎಲ್ಲರು ಒಟ್ಟಾಗಿ ಸೇರ್ತೇವೆ. ಮೈಸೂರಿಗೆ ಜಿ.ಟಿ.ದೇವೇಗೌಡ ಉಸ್ತುವಾರಿ ಸಚಿವರಾಗಿದ್ದಾರೆ. ಸಾ. ರಾ. ಮಹೇಶ್ ಕೊಡುಗು ಉಸ್ತುವಾರಿ ಸಚಿವರಾಗಿದ್ದಾರೆ. ಸಾಲದ್ದಕ್ಕೆ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ನಾನು ಕೂಡ ಇದ್ದೇನೆ, ನಾವೆಲ್ಲರೂ ಒಟ್ಟಾಗಿ ಮೈಸೂರಲ್ಲಿ ವಿಜಯದ ಬಾಗಿಲು ತೆರೆಯುತ್ತೇವೆ ಅಂತಾನೂ ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಣಾಳಿಕೆ ಘೋಷಣೆ ಮಾಡದ ನಟ ಉಪೇಂದ್ರ ಹೇಳಿದ್ದೇನು?