Publish Date: Thu, 04 Apr 2019 (20:47 IST)
Updated Date: Thu, 04 Apr 2019 (20:50 IST)
ಪ್ರಶ್ನೆ: ನಾನು 29 ವರ್ಷದ ಯುವಕ. ಒಳ್ಳೆಯ ಕೆಲಸದಲ್ಲಿ ಇದ್ದೇನೆ. ನನ್ನ ಮದುವೆಯಾಗಿ ಮೂರು ತಿಂಗಳಾಗಿವೆ. ಮದುವೆಗೆ 8 ದಿನ ಬಾಕಿ ಇರುವಾಗಲೇ ನನ್ನ ಸ್ನೇಹಿತರು ನನ್ನನ್ನು ಪುಣೆಯ ರೆಡ್ ಲೈಟ್ ಏರಿಯಾಕ್ಕೆ ಕರೆದುಕೊಂಡು ಹೋಗಿದ್ದರು. ಮದುವೆಯಾದ ಮೇಲೆ ಹಾಸಿಗೆ ಸುಖ ಅನುಭವಿಸುವುದಕ್ಕಿಂತ ಮೊದಲೇ ಟ್ರೈನಿಂಗ್ ತಗೋ ಎಂದು ಹುರುದುಂಬಿಸಿದ್ದರು. ಅಲ್ಲಿ ಎರಡು ದಿನ ಇದ್ದು ಇಬ್ಬರು ಯುವತಿಯೊಂದಿಗೆ ಎರಡು ದಿನ ಕಳೆದಿದ್ದೆ. ಆದರೆ ಈಗ ಪವಿತ್ರ ಎಂಬ ಸುಂದರವಾದ ಮಡದಿ ಇದ್ದಾಳೆ. ನನ್ನನ್ನು ಗಾಢವಾಗಿ ಪ್ರೀತಿಸುತ್ತಿದ್ದಾಳೆ. ನಾನೂ ಕೂಡ ಅವಳನ್ನು ಲವ್ ಮಾಡುತ್ತಿರುವೆ. ಮದುವೆಗೂ ಮೊದಲೇ ನಾನು ರೆಡ್ ಲೈಟ್ ಏರಿಯಾಕ್ಕೆ ಹೋದ ವಿಷಯವನ್ನು ನನ್ನ ಪತ್ನಿಯಾಗಿರುವ ಪವಿತ್ರಳಿಗೆ ತಿಳಿಸಲಾ?
ಉತ್ತರ: ಮದುವೆಗೂ ಮೊದಲೇ ನೀವು ನಿಮ್ಮ ಹೆಂಡತಿಗೆ ಅನ್ಯಾಯ ಮಾಡಿದ್ದೀರಿ. ಪ್ರತಿ ಹೆಣ್ಣು ತನ್ನ ಗಂಡನಾದವನು ಶ್ರೀರಾಮಚಂದ್ರನಂತೆ ಇರಬೇಕು ಎಂದು ಸಹಜವಾಗಿ ಬಯಸುತ್ತಾಳೆ. ಆದರೆ ನೀವು ಮಾಡಿರೋದೇ ಬೇರೆ. ಇರಲಿ ಕಾಲ ಇನ್ನೂ ಮಿಂಚಿಲ್ಲ. ನಿಮ್ಮ ಪತ್ನಿಗೆ ನಿಮ್ಮ ಹಿಂದಿನ ರೆಡ್ ಲೈಟ್ ಏರಿಯಾದ ವಿಷಯವನ್ನು ತಕ್ಷಣಕ್ಕೆ ಹೇಳಬೇಡಿ.
ಅದರಿಂದ ಅವಳು ನಿಮ್ಮ ಮೇಲಿಟ್ಟಿರುವ ಭರವಸೆ, ನಂಬಿಕೆ ಒಮ್ಮೆಲೆ ಕುಸಿದು ಹೋಗಬಹುದು. ಒಂದಷ್ಟು ಸಮಯ ಆ ವಿಷಯ ನಿಮ್ಮಲ್ಲೇ ಇರಲಿ. ನೀವು ಕೂಡಾ ಆ ವಿಷಯವನ್ನು ಮರೆತುಬಿಡಿ. ನಿಮ್ಮ ಪತ್ನಿಗೆ ಉತ್ತಮವಾದ ವಿಷಯ, ಪ್ರೋತ್ಸಾಹದಾಯಕ ಮಾತು, ಸಂತಸದ ಸುದ್ದಿಗಳನ್ನು ಹೇಳಿ. ಅವರನ್ನು ಖುಷಿಯಾಗಿ ಇಡಿ. ನೀವು ಇನ್ನೊಮ್ಮೆ ರೆಡ್ ಲೈಟ್ ಏರಿಯಾಕ್ಕೆ ಹೋಗುವ ಸಹವಾಸ ಮಾಡಬೇಡಿ. ಇದರಿಂದ ನಿಮ್ಮ ಬದುಕೇ ದಾರಿ ತಪ್ಪಬಹುದು. ತಪ್ಪು ಮಾಡೋದು ಸಹಜವಾದರೂ, ಇಂತಹ ತಪ್ಪುಗಳನ್ನು ಮರುಕಳಿಸದಿದ್ದರೆ ಒಳಿತು.