Publish Date: Sun, 21 Apr 2019 (13:50 IST)
Updated Date: Sun, 21 Apr 2019 (13:52 IST)
ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ಮಂಕಡ್ ಔಟ್ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ.
ಐಪಿಎಲ್ ನ ಮೊದಲ ಪಂದ್ಯದಲ್ಲಿಯೇ ರಾಜಸ್ಥಾನ್ ರಾಯಲ್ಸ್ ಆಟಗಾರ ಜೋಸ್ ಬಟ್ಲರ್ ರನ್ನು ಮಂಕಡ್ ಔಟ್ ಮಾಡಿ ಸುದ್ದಿಯಾಗಿದ್ದ ಅಶ್ವಿನ್ ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ರನ್ನು ಇದೇ ರೀತಿ ಔಟ್ ಮಾಡಲು ಹೋಗಿ ವಿಫಲರಾಗಿದ್ದಾರೆ.
ಅಶ್ವಿನ್ ಬಾಲ್ ಎಸೆಯಲು ಬಂದಾಗ ಕ್ರೀಸ್ ಬಿಡಲು ಮುಂದಾದ ಧವನ್ ರನ್ನು ಮಂಕಡ್ ಔಟ್ ಮಾಡಲು ಯತ್ನಿಸಿದರು. ಆದರೆ ಧವನ್ ಕಾಲು ಮಾತ್ರ ಕ್ರೀಸ್ ನಿಂದ ಮುಂದೆ ಇಟ್ಟಿದ್ದರು. ಬ್ಯಾಟ್ ಕ್ರೀಸ್ ನೊಳಗೇ ಇಟ್ಟುಕೊಂಡಿದ್ದರು. ಅಶ್ವಿನ್ ಮತ್ತೆ ಬೌಲಿಂಗ್ ಗೆ ತೆರಳಿದಾಗ ಧವನ್ ಕ್ರೀಸ್ ನಲ್ಲಿ ಕಾಲಿಡುತ್ತಾ ಡ್ಯಾನ್ಸ್ ಮಾಡಿ ತಮಾಷೆ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ