Publish Date: Fri, 29 Mar 2019 (08:41 IST)
Updated Date: Fri, 29 Mar 2019 (08:43 IST)
ಮುಂಬೈ: ಐಪಿಎಲ್ ನ ಮೊದಲ ಪಂದ್ಯದಲ್ಲೇ ಮಂಕಡ್ ಔಟ್ ಮಾಡಿ ವಿವಾದಕ್ಕೀಡಾಗಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ರವಿಚಂದ್ರನ್ ಅಶ್ವಿನ್ ಮಾಡಿದ್ದು ನೈತಿಕವಾಗಿ ತಪ್ಪು ಎಂದು ಎಲ್ಲರೂ ಅವರನ್ನು ಜರಿಯುತ್ತಿದ್ದರೆ, ‘ವಾಲ್’ ರಾಹುಲ್ ದ್ರಾವಿಡ್ ಬೆಂಬಲ ನೀಡಿದ್ದಾರೆ.
ಕ್ರಿಕೆಟ್ ನ ಜಂಟಲ್ ಮ್ಯಾನ್ ಎಂದೇ ಕರೆಸಿಕೊಳ್ಳುವ ದ್ರಾವಿಡ್ ಅಶ್ವಿನ್ ಮಾಡಿದ್ದು ತಪ್ಪಲ್ಲ ಎಂದಿದ್ದಾರೆ. ಆದರೆ ಹಾಗೆ ಔಟ್ ಮಾಡುವ ಮೊದಲು ಎಚ್ಚರಿಕೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಶ್ವಿನ್ ಕೃತ್ಯವನ್ನು ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಸೇರಿದಂತೆ ಕೆಲವರು ಟೀಕಿಸಿದ್ದರು. ಆದರೆ ದ್ರಾವಿಡ್ ‘ಅಶ್ವಿನ್ ಮಾಡಿದ್ದು ತಪ್ಪು ಎಂದು ನಾನು ಹೇಳಲ್ಲ. ಆದರೆ ವೈಯಕ್ತಿಕವಾಗಿ ಹೇಳಬೇಕೆಂದರೆ, ಹಾಗೆ ಮಾಡುವ ಮೊದಲು ಒಂದು ಎಚ್ಚರಿಕೆ ನೀಡಬಹುದಿತ್ತು’ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ