Publish Date: Wed, 27 Mar 2019 (08:45 IST)
Updated Date: Wed, 27 Mar 2019 (08:46 IST)
ಜೈಪುರ: ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಔಟ್ ಮಾಡಿದ ರೀತಿ ಇದೀಗ ಕ್ರಿಕೆಟ್ ನ ಕೆಲವು ದಿಗ್ಗಜರ ಕೆಂಗಣ್ಣಿಗೆ ಗುರಿಯಾಗಿದೆ.
ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಜೋಸ್ ಬಟ್ಲರ್ ರನ್ನು ಉಪಾಯವಾಗಿ ರನೌಟ್ ಮಾಡಿದ ಅಶ್ವಿನ್ ನಡೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಬಗ್ಗೆ ರಾಜಸ್ಥಾನ್ ತಂಡದ ಮಾಜಿ ನಾಯಕ ಶೇನ್ ವಾರ್ನ್ ‘ಅಶ್ವಿನ್ ನಡತೆ ತೀರಾ ಬೇಸರ ತಂದಿದೆ’ ಎಂದಿದ್ದಾರೆ.
ಟ್ವಿಟರ್ ನಲ್ಲಿ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ವಾರ್ನ್ ‘ಒಬ್ಬ ನಾಯಕನಾಗಿ ಮತ್ತು ವೈಯಕ್ತಿಕವಾಗಿ ಅಶ್ವಿನ್ ನಡೆ ಬೇಸರವುಂಟುಮಾಡಿದೆ. ಎಲ್ಲಾ ನಾಯಕರು ಐಪಿಎಲ್ ವಾಲ್ ನಲ್ಲಿ ಸಹಿ ಹಾಕಿ ಕ್ರೀಡಾ ಸ್ಪೂರ್ತಿ ಕಳೆದುಕೊಳ್ಳದೇ ಆಡುವುದಾಗಿ ಭರವಸೆ ನೀಡುತ್ತಾರೆ. ರವಿಚಂದ್ರನ್ ಅಶ್ವಿನ್ ಗೆ ಬಾಲ್ ಹಾಕುವ ಉದ್ದೇಶವೇ ಇರಲಿಲ್ಲ, ಹಾಗಾಗಿ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಬೇಕು. ಈ ವಿವಾದದ ಬಗ್ಗೆ ಬಿಸಿಸಿಐ ಗಮನಹರಿಸಬೇಕು’ ಎಂದು ವಾರ್ನ್ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ