Publish Date: Wed, 27 Mar 2019 (09:43 IST)
Updated Date: Wed, 27 Mar 2019 (09:45 IST)
ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ರನ್ನು ಮಂಕಡ್ ಔಟ್ ಮಾಡಿದ್ದು ಇದೀಗ ಭಾರೀ ವಿವಾದಕ್ಕೀಡಾಗಿದೆ.
ಆದರೆ ಈ ರೀತಿ ಬ್ಯಾಟ್ಸ್ ಮನ್ ನ್ನು ಔಟ್ ಮಾಡುವ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ನಡುವೆ ಹಿಂದೆಯೇ ಒಪ್ಪಂದವೊಂದು ನಡೆದಿತ್ತು ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಬಹಿರಂಗಪಡಿಸಿದ್ದಾರೆ.
‘ನನಗೆ ನೆನಪಿರುವ ಹಾಗೆ ನಾಯಕರು ಮತ್ತು ಮ್ಯಾಚ್ ರೆಫರಿಗಳ ಸಭೆಯಲ್ಲಿ ಸಿಎಸ್ ಕೆ ಮತ್ತು ಆರ್ ಸಿಬಿ ನಾಯಕರು ಐಪಿಎಲ್ ನಲ್ಲಿ ಬ್ಯಾಟ್ಸ್ ಮನ್ ಗಳನ್ನು ಮಂಕಡ್ ಔಟ್ ಮಾಡುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡಿದ್ದರು’ ರಾಜೀವ್ ಶುಕ್ಲಾ ಟ್ವಿಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ